ಯುವತಿಗೆ ಕಿರುಕುಳ ನೀಡಿದ ಬಸ್‌ ಸಿಬ್ಬಂದಿಗೆ ಆಕೆಯ ಕುಟುಂಬಸ್ಥರ ಕೈಯಿಂದ ಬಿತ್ತು ಗೂಸಾ

Updated By: Digi Tech Desk

Updated on: Sep 11, 2025 | 3:18 PM

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಆ ಬಸ್‌ ಸಿಬ್ಬಂದಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ್ದು, ಇದರಿಂದ ರೊಚ್ಚಿಗೆದ್ದ ಆ ಯವತಿಯ ಕುಟುಂಬಸ್ಥರು ಬಸ್‌ ಸಿಬ್ಬಂದಿಗೆ ಧರ್ಮದೇಟು ನೀಡಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಸ್‌ನಿಂದ ಆ ಸಿಬ್ಬಂದಿಯನ್ನು ಎಳೆದೊಯ್ದು ಯುವತಿಯ ಕುಟುಂಬಸ್ಥರು ಆತನ ಬಟ್ಟೆ ಬಿಚ್ಚಿ ಥಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್‌ 11: ಹೈದರಬಾದ್‌ನಿಂದ ಬೆಂಗಳೂರಿಗೆ  ಖಾಸಗಿ ಬಸ್‌ನಲ್ಲಿ ಬರುತ್ತಿದ್ದ ವೇಳೆ ಆ ಬಸ್‌ ಸಿಬ್ಬಂದಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿದಂತಹ ಘಟನೆ ನಡೆದಿದೆ.   ಆ ಯುವತಿ ತಾನು ಚಾರ್ಜ್‌ಗೆ ಇಟ್ಟಂತಹ ಮೊಬೈಲ್‌ ಕೊಡಿ ಎಂದು ಕೇಳಿದಾಗ ಬಸ್‌ ಸಿಬ್ಬಂದಿ ಮುತ್ತು ಕೊಟ್ಟರೆ ಮಾತ್ರ ಮೊಬೈಲ್‌ ನೀಡುವುದಾಗಿ ಹೇಳಿದ್ದು, ಈ ವಿಷಯವನ್ನು ಆ ಯುವತಿ ತಕ್ಷಣ ಫೋನ್‌ ಮಾಡಿ ತನ್ನ  ಕುಟುಂಬಸ್ಥರಿಗೆ  ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ಬಸ್‌ ಬೆಂಗಳೂರಿಗೆ ಬಂದ ತಕ್ಷಣ ಸಿಬ್ಬಂದಿಯನ್ನು ಎಳೆದು ತಂದು ಬಟ್ಟೆ ಬಿಚ್ಚಿ  ಧರ್ಮದೇಟು ನೀಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 11, 2025 01:39 PM