ಹೊಳೆಯಂತಾದ ಬೆಂಗಳೂರು ರಸ್ತೆಗಳು, ಡಿಕೆ ಶಿವಕುಮಾರ್ ಚನ್ನಪಟ್ಟಣದ ಚುನಾವಣೆಯಲ್ಲಿ ಬ್ಯೂಸಿ!
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲಿದ್ದಾರೆ ಅಂತ ಬೆಂಗಳೂರು ನಿವಾಸಿಗಳಿಗೆ ಚೆನ್ನಾಗಿ ಗೊತ್ತು. ಚನ್ನಪಟ್ಟಣದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ತಮ್ಮ ಸಹೋದರ ಡಿಕೆ ಸುರೇಶ್ರನ್ನು ಗೆಲ್ಲಿಸುವ ಉಮ್ಮೇದಿ. ಬೆಂಗಳೂರು ಮಳೆ, ಜನರ ತಾಪತ್ರಯ? ಮತ್ತೊಂದು ಹೇಳಿಕೆ ನೀಡಿದರಾಯ್ತು!
ಬೆಂಗಳೂರು: ಇದನ್ನು ಬೆಂಗಳೂರಿನ ನಿವಾಸಿಗಳು ಡಬಲ್ ರೋಡ್ ಅನ್ನುತ್ತಾರೆ. ಸಿಂಗಲ್ ರೋಡೇ ಕಾಣಿಸ್ತಿಲ್ಲ, ಡಬಲ್ ರೋಡ್ ಎಲ್ಲಿ ಸ್ವಾಮಿ ಅಂತ ನಿಮ್ಮ ಪ್ರಶ್ನೆಯಾಗಿರಬಹುದು. ಇದನ್ನೇ ಬೆಂಗಳೂರು ನಗರದ ಮಹಿಮೆ ಅನ್ನೋದು. ಇವತ್ತು ಬೆಳಗ್ಗೆ ಬೆಂಗಳೂರಲ್ಲಿ ಸುರಿದ ಧಾರಾಕರ ಮಳೆಯಿಂದ ಉಂಟಾಗಿರುವ ಸ್ಥಿತಿ ಇದು. ಮೊನ್ನೆ ಮಾಧ್ಯಮಗಳ ಜೊತೆ ಮಾತಾಡುವಾಗ, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಮಳೆ ಬರಲಿ, ನಾವು ಎದುರಿಸಲು ಸಿದ್ಧರಿದ್ದೇವೆ ಅಂದಿದ್ದರು. ಎಲ್ಲೀದ್ದೀರಿ ಸ್ವಾಮಿ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೆಡಿಎಸ್ ಮುಖಂಡರು ಇಷ್ಟು ದುರ್ಬಲರು ಅಂತ ಭಾವಿಸಿರಲಿಲ್ಲ: ಡಿಕೆ ಶಿವಕುಮಾರ್