ಬೆಂಗಳೂರು: ಬೀದಿಯಲ್ಲಿ ಕಸ ಎಸೆದಿದ್ದನ್ನು ಪ್ರಶ್ನಿಸಿದ ಪೌರಕಾರ್ಮಿಕನ ಮೇಲೆ ಹಲ್ಲೆ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರಿನ ಶ್ರೀನಿವಾಸನಗರ ಸಮೀಪ ಕಸ ಎಸೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಪೌರ ಕಾರ್ಮಿಕ ನಾಗೇಂದ್ರ ಮೇಲೆ ಹಲ್ಲೆ ನಡೆದಿದೆ. ಸ್ವಚ್ಛಗೊಳಿಸಿದ ಜಾಗದಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಸ್ಕೂಟಿಯಲ್ಲಿ ಬಂದು ಕಸ ಎಸೆಯುವಾಗ ಕಾರ್ಮಿಕ ಪ್ರಶ್ನೆ ಮಾಡಿದ್ದ. ಆತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹೆಲ್ಮೆಟ್ನಿಂದ ಮೂರು ಬಾರಿ ಹಲ್ಲೆ ನಡೆಸಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಅಕ್ಟೊಬರ್ 10: ಬೆಂಗಳೂರಿನ ಶ್ರೀನಿವಾಸನಗರ ಸಮೀಪ ಕಸ ಎಸೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಪೌರ ಕಾರ್ಮಿಕ ನಾಗೇಂದ್ರ ಮೇಲೆ ಹಲ್ಲೆ ನಡೆದಿದೆ. ಸ್ವಚ್ಛಗೊಳಿಸಿದ ಜಾಗದಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಸ್ಕೂಟಿಯಲ್ಲಿ ಬಂದು ಕಸ ಎಸೆಯುವಾಗ ಕಾರ್ಮಿಕ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹೆಲ್ಮೆಟ್ನಿಂದ ಮೂರು ಬಾರಿ ಹಲ್ಲೆ ನಡೆಸಿದ್ದಾರೆ. ಪೌರಕಾರ್ಮಿಕ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಕಾಸ್, ಟಿವಿ9 ಬೆಂಗಳೂರು
Published on: Oct 10, 2025 11:01 AM