ಬೆಂಗಳೂರಲ್ಲಿ 7 ಜನರ ಹತ್ಯೆ ಕೇಸ್​​: ಆರೋಪಿಯ ಕರಾಳ ಇತಿಹಾಸ ಬಿಚ್ಚಿಟ್ಟ ಸಂಬಂಧಿಕರು

Updated on: Nov 06, 2026 | 11:16 AM

ಬೆಂಗಳೂರಿನಲ್ಲಿ ನಡೆದ ಏಳು ಜನರ ಭೀಕರಹತ್ಯೆ ಪ್ರಕರಣ ಕುರಿತು ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ. ಆರೋಪಿ ಇಂದುಶೇಖರ್ ಆಸ್ತಿ ವಿವಾದ ಹಾಗೂ ಪತ್ನಿ ಮೇಲಿನ ಕೋಪಕ್ಕೆ ಒಬ್ಬರ ನಂತರ ಒಬ್ಬರನ್ನು ಕರೆಸಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಮೃತದೇಹಗಳನ್ನು ನಂದಿಬೆಟ್ಟ ಮತ್ತು ಚಾರ್ಮಾಡಿಗೆ ಎಸೆದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು, ನವೆಂಬರ್​​ 06: ಏಳು ಜನರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಸಂಬಂಧಿಕರಾದ ಶಿವಕುಮಾರ್ ಅವರು ಪ್ರಕರಣದ ವಿವರಗಳನ್ನು ಟಿವಿ9 ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಆರೋಪಿ ಇಂದುಶೇಖರ್ ಆಸ್ತಿ ವಿವಾದ ಮತ್ತು ತನ್ನ ಪತ್ನಿ ಸುನಿತಾ ಮೇಲಿನ ಕೋಪದಿಂದ ಈ ಭೀಕರ ಕೃತ್ಯ ಎಸಗಿದ್ದಾನೆ. ಕಳೆದ 15-20 ದಿನಗಳಿಂದ ಶೇಖರ್ ತನ್ನ ಪತ್ನಿ ಕಡೆಯ ಕುಟುಂಬ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ. ಮೃತದೇಹಗಳನ್ನು ನಂದಿಬೆಟ್ಟ, ಚಾರ್ಮಾಡಿ ಸೇರಿದಂತೆ ಹಲವೆಡೆ ಎಸೆದು ಬಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಶೇಖರ್ ಮೊದಲು ತನ್ನ ಪತ್ನಿಯನ್ನು ಹತ್ಯೆಗೈದ ನಂತರ, ಮಾವ, ಅತ್ತೆ, ಮಗ, ಸೊಸೆ, ಮೊಮ್ಮಗ ಸೇರಿದಂತೆ ಏಳು ಜನರನ್ನು ಹೀನಾಯವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಇಂತಹ ಕ್ರೂರ ಕೃತ್ಯ ಎಸಗಿದ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಶೇಖರ್ ಹಿಂದೆ ಕೂಡ ಸರಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More