ಮತ ಹಾಕಿದವರಿಗೆ ಗರಿ ಗರಿ ಬೆಣ್ಣೆ ದೋಸೆ, ಮೈಸೂರು ಪಾಕ್ ಫ್ರೀಯಾಗಿ ನೀಡುತ್ತಿರುವ ನಿಸರ್ಗ ಹೋಟೆಲ್

| Updated By: Digi Tech Desk

Updated on: May 11, 2023 | 5:11 PM

ಮತ ಹಾಕಿದ ಮತದಾರರು ತಮ್ಮ ಬೆರಳಿಗೆ ಹಾಕಲಾದ ಶಾಯಿ ತೋರಿಸಿ ಇಲ್ಲಿ ಉಚಿತವಾಗಿ ದೋಸೆ, ಸಿಹಿ ಸೇವಿಸಬಹುದು. ಬೆಂಗಳೂರಿನ ನಿಸರ್ಗ ಗ್ರ್ಯಾಂಡ್ ಹೋಟೆಲ್, ತಮ್ಮ ಶಾಯಿಯನ್ನು ತೋರಿಸುವವರಿಗೆ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ಅನ್ನು ಉಚಿತವಾಗಿ ನೀಡುತ್ತಿದೆ.

ಬೆಂಗಳೂರು: ಮತದಾನ ಮಾಡಿದ ಜನರಿಗೆ ಬೆಂಗಳೂರಿನ ಕೆಲ ಹೋಟೆಲ್​ಗಳು ಉಚಿತ ಉಪಹಾರವನ್ನು ನೀಡುತ್ತಿವೆ. ನಗರದ ನಿಸರ್ಗ ಗ್ರ್ಯಾಂಡ್ ಹೋಟೆಲ್​ನಲ್ಲಿ ಮತದಾರರು ಮತ ಹಾಕಿದ ಗುರುತನ್ನು ತೋರಿಸಿದರೆ ಸಾಕು ಉಚಿತವಾಗಿ ಬಿಸಿ ಬಿಸಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸನ್ನು ಸವಿಯಬಹುದು.

ಬೆಂಗಳೂರಿನ ನಿಸರ್ಗ ಗ್ರ್ಯಾಂಡ್ ಹೋಟೆಲ್, ತಮ್ಮ ಶಾಯಿಯನ್ನು ತೋರಿಸುವವರಿಗೆ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ಅನ್ನು ಉಚಿತವಾಗಿ ನೀಡುತ್ತಿದೆ. ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದು ಇದುವರೆಗೂ ಸುಮಾರು 3000 ಜನ ತಿಂಡಿ ಸೇವಿಸಿದ್ದಾರೆ ಎಂದು ನಿಸರ್ಗ ಗ್ರ್ಯಾಂಡ್ ಹೋಟೆಲ್​ನ ಮಾಲೀಕರಾದ ಕೃಷ್ಣ ರಾಜ್ ತಿಳಿಸಿದ್ದಾರೆ. ಮತ ಹಾಕಿದ ಮತದಾರರು ತಮ್ಮ ಬೆರಳಿಗೆ ಹಾಕಲಾದ ಶಾಯಿ ತೋರಿಸಿ ಇಲ್ಲಿ ಉಚಿತವಾಗಿ ದೋಸೆ, ಸಿಹಿ ಸೇವಿಸಬಹುದು.

ವಿಧಾಸನಭೆ ಚುನಾವಣೆಯಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಉಪಾಹಾರ ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್​ಗಳ ನಿರ್ಧಾರಕ್ಕೆ ಬಿಬಿಎಂಪಿ ನಿರ್ಬಂಧ ವಿಧಿಸಿದ್ದಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ಮಂಗಳವಾರ ಸಂಜೆ ವಿಚಾರಣೆ ನಡೆಯಿತು. ಮತದಾನ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವು. ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘಟನೆ ಮನವಿ ಮಾಡಿತು. ಇದನ್ನು ಹೈಕೋರ್ಟ್ ಪುರಸ್ಕರಿಸಿದೆ.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published on: May 10, 2023 02:01 PM