ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ ನೋಡಿ

Edited By:

Updated on: Mar 04, 2026 | 7:14 AM

ಬೆಂಗಳೂರಿನ HSR ಲೇಔಟ್‌ನ ಎಳ್ಳುಕುಂಟೆ ಗ್ರಾಮದಲ್ಲಿ ಬಿಲ್ಡರ್ ನಿಧಿ ಆಸೆಗೆ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್ ಅಗೆದ ಆರೋಪ ಕೇಳಿಬಂದಿದೆ. ನೂರಾರು ವರ್ಷದ ಹಳೆಯ ವೀರಗಲ್ಲು ಕೆಳಗೆ ನಿಧಿ ಇದೆ ಎಂದು ನಂಬಿದ್ದ ಬಿಲ್ಡರ್ ಕಾಂಪೌಂಡ್ ಮುಚ್ಚಿ, ಪೂಜೆ ಮಾಡಿ ಅಗೆಯುವ ಕೆಲಸ ಶುರು ಮಾಡಿದ್ದರು. ಸ್ಥಳೀಯರ ಗಮನಕ್ಕೆ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಮಾರ್ಚ್​ 04: ಇತ್ತೀಚೆಗೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಗೆಯುವಾಗ ನಿಧಿ ಪತ್ತೆಯಾಗಿದ್ದ ವಿಚಾರ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಬೆಂಗಳೂರಿನಲ್ಲೊಂದು ಘಟನೆ ಬೆಳಕಿಗೆ ಬಂದಿದೆ. ನಿಧಿ ಆಸೆಗಾಗಿ ಬಿಲ್ಡರ್​ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದಿರುವ ಘಟನೆ ಬೆಂಗಳೂರಿನ HRS ಲೇಔಟ್​ನಲ್ಲಿ ಎಳ್ಳುಕುಂಟೆಯಲ್ಲಿ ನಡೆದಿದೆ. ಸದ್ತ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​ನ ಹಿಂಭಾಗದಲ್ಲಿ ಅಗೆದಿರುವುದಾಗಿ ಬಿಲ್ಡರ್ ಸುಧಾಕರ್ ನಾಯ್ಡು ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಅಪಾರ್ಟ್​ಮೆಂಟ್​ನ ಹಿಂಭಾಗದಲ್ಲಿ ಹಳೆಯ ವೀರಗಲ್ಲು ಇದೆ. ಅದರ ಕೆಳಗಡೆ ನಿಧಿ ಇದೆ ಎಂದು ಸುಧಾಕರ್ ನಾಯ್ಡು ನಂಬಿದ್ದ. ಕಾಂಪೌಂಡ್​ಗೆ ತಗಡಿನ ಶೀಟ್ ಹೊಡೆದು ಕವರ್ ಮಾಡಿ, ಅಪಾರ್ಟ್​ಮೆಂಟ್​ನ ಬೇಸ್ಮೆಂಟ್ ಸ್ಥಳದಲ್ಲಿ ಅಗೆದಿದ್ದಾನೆ. ಸದ್ಯ ವಿಚಾರ ಗೊತ್ತಾಗಿ ಸುಧಾಕರ್​ಗೆ ಜನರು ಕ್ಲಾಸ್​ ತೆಗೆದುಕೊಂಡಿದ್ದಾರೆ. ಹೆಚ್ಎಸ್ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More