ಬೆಂಗಳೂರು ಕಂಬಳ ಭರ್ಜರಿ ಆರಂಭ; ಇಲ್ಲಿದೆ ವಿಡಿಯೋ
ಬೆಂಗಳೂರು ಕಂಬಳ(Kambala)ಕ್ಕೆ ಇಂದು(ನ.25) ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ಚಿನಿ ಪುನೀತ್ ರಾಜ್ಕುಮಾರ್ ಅವರುಕಂಬಳದ ಕೆರೆಗೆ ಚಾಲನೆ ನೀಡಿದರು. ಈ ವೇಳೆ ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಕೂಡ ಜೊತೆಗಿದ್ದರು. ಇನ್ನು ಕಂಬಳ ನಾಳೆ ಮುಕ್ತಾಯಗೊಳ್ಳಲಿದೆ. ಎರಡು ದಿನ ಬೆಂಗಳೂರಿನಲ್ಲಿರುವ ತುಳುಭಾಷಿಕರಿಗೆ ಹಾಗೂ ನಗರವಾಸಿಗಳು ಸೇರಿದಂತೆ ಎಲ್ಲರೂ ಕೂಡ ಕೋಣಗಳ ಗತ್ತಿನ ಓಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಬೆಂಗಳೂರು, ನ.25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ಕಂಬಳ(Kambala)ಕ್ಕೆ ಇಂದು(ನ.25) ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ಚಿನಿ ಪುನೀತ್ ರಾಜ್ಕುಮಾರ್ ಅವರುಕಂಬಳದ ಕೆರೆಗೆ ಚಾಲನೆ ನೀಡಿದರು. ಈ ವೇಳೆ ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಕೂಡ ಜೊತೆಗಿದ್ದರು. ಇನ್ನು ಕಂಬಳ ನಾಳೆ ಮುಕ್ತಾಯಗೊಳ್ಳಲಿದೆ. ಎರಡು ದಿನ ಬೆಂಗಳೂರಿನಲ್ಲಿರುವ ತುಳುಭಾಷಿಕರಿಗೆ ಹಾಗೂ ನಗರವಾಸಿಗಳು ಸೇರಿದಂತೆ ಎಲ್ಲರೂ ಕೂಡ ಕೋಣಗಳ ಗತ್ತಿನ ಓಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇನ್ನು ಈ ಕುರಿತು ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕಂಬಳ ಕ್ರೀಡೆಯನ್ನು ನಾನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಕಂಬಳ ಕರಾವಳಿ ಜಿಲ್ಲೆಗಳ ಜಾನಪದ ಕಲೆ, ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ