ಕಂಬಳ ಹೇಗೆ ಪ್ರಾರಂಭ ಆಯ್ತು ಗೊತ್ತಾ? ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ರು ಇತಿಹಾಸ; ಇಲ್ಲಿದೆ ವಿಡಿಯೋ

ಕಂಬಳ ಹೇಗೆ ಪ್ರಾರಂಭ ಆಯ್ತು ಗೊತ್ತಾ? ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ರು ಇತಿಹಾಸ; ಇಲ್ಲಿದೆ ವಿಡಿಯೋ

ಕಿರಣ್ ಹನುಮಂತ್​ ಮಾದಾರ್
|

Updated on: Nov 25, 2023 | 8:27 PM

ಕಂಬಳ(Kambala) ಕರಾವಳಿ ಜಿಲ್ಲೆಗಳ ಜಾನಪದ ಕಲೆ, ಇದು ರೈತರು ಭತ್ತ ಬೆಳಿತಾ ಇದ್ದರು, ಆಗ ವ್ಯವಸಾಯ ಇಲ್ಲದ ಸಮಯ ಅಂದರೆ, ನವೆಂಬರ್​, ಡಿಸೆಂಬರ್​ ಹೀಗೆ ಕೆಲ ತಿಂಗಳಲ್ಲಿ ಜಾನುವಾರಗಳ ಉತ್ಸವವನ್ನು ಮಾಡಿ, ಅವುಗಳನ್ನು ಕ್ರೀಡೆಯಲ್ಲಿ ತೊಡಗಿಸಿ ಮನರಂಜನೆ ಪಡೆಯುತ್ತಿದ್ದರು. ಹೀಗೆ ಈ ಕ್ರೀಡೆ ಬೆಳೆದುಬಂತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು, ನ.25: ಐತಿಹಾಸಿಕ ಕಂಬಳಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ(Siddaramaiah), ‘ಕಂಬಳ ಕ್ರೀಡೆಯನ್ನು ನಾನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು. ಕಂಬಳ(Kambala) ಕರಾವಳಿ ಜಿಲ್ಲೆಗಳ ಜಾನಪದ ಕಲೆ, ಇದು ರೈತರು ಭತ್ತ ಬೆಳಿತಾ ಇದ್ದರು, ಆಗ ವ್ಯವಸಾಯ ಇಲ್ಲದ ಸಮಯ ಅಂದರೆ, ನವೆಂಬರ್​, ಡಿಸೆಂಬರ್​ ಹೀಗೆ ಕೆಲ ತಿಂಗಳಲ್ಲಿ ಜಾನುವಾರಗಳ ಉತ್ಸವವನ್ನು ಮಾಡಿ, ಅವುಗಳನ್ನು ಕ್ರೀಡೆಯಲ್ಲಿ ತೊಡಗಿಸಿ ಮನರಂಜನೆ ಪಡೆಯುತ್ತಿದ್ದರು. ಹೀಗೆ ಈ ಕ್ರೀಡೆ ಬೆಳೆದುಬಂತು ಎಂದರು.

ಇನ್ನು ಇದನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ, ಕರಾವಳಿಯ ಲಕ್ಷಾಂತರ ಜನರು ಬೆಂಗಳೂರು ನಗರದಲ್ಲಿ ನೆಲೆಸಿದ್ದಾರೆ. ಈ ಹಿಂದೆ ಎರಡು ಬಾರಿ ಕರಾವಳಿಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಬೆಂಗಳೂರಿನಲ್ಲಿ ಪ್ರತಿವರ್ಷ ಕಂಬಳ ಮುಂದುವರಿಸುವ ಕೆಲಸ ಮಾಡಿ, ಬೆಂಗಳೂರಿನ ನಿವಾಸಿಗಳಿಗೂ ಇದು ಮನೋರಂಜನೆಯ ಕ್ರೀಡೆ ಆಗುತ್ತದೆ.
ಕಂಬಳ ಸಮುದಾಯ ಭವನ ನಿರ್ಮಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ