ಉಂಡ ಮನೆಗೆ ಕನ್ನ ಹಾಕಿದ ಆಸಾಮಿ: ಕರ್ನಾಟಕ ಬ್ಯಾಂಕ್‌ಗೆ 16 ಲಕ್ಷ ರೂ ವಂಚನೆ
ವರ್ತೂರಿನ ಕರ್ನಾಟಕ ಬ್ಯಾಂಕ್‌ನಲ್ಲಿ ಚಿನ್ನ ಮೌಲ್ಯಮಾಪಕ ರವಿಕುಮಾರ್ ನಕಲಿ ಚಿನ್ನ ಬಳಸಿಕೊಂಡು 16.53 ಲಕ್ಷ ರೂ. ವಂಚನೆ ಮಾಡಿದ್ದಾರೆ. ನಕಲಿ ಗ್ರಾಹಕರೊಂದಿಗೆ ಸೇರಿ, ಬ್ಯಾಂಕಿಗೆ ಮಹಾಮೋಸ ಮಾಡಿದ ಈತ, ನಕಲಿ ಚಿನ್ನವನ್ನು ಅಸಲಿ ಎಂದು ಪ್ರಮಾಣೀಕರಿಸುತ್ತಿದ್ದ. ಈ ಪ್ರಕರಣದಲ್ಲಿ ರವಿಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಮೇ 24: ನಗರದ ವರ್ತೂರಿನಲ್ಲಿರುವ ಕರ್ನಾಟಕ ಬ್ಯಾಂಕ್‌ನಲ್ಲಿ 16.53 ಲಕ್ಷ ರೂ ಮೊತ್ತದ ನಕಲಿ ಚಿನ್ನ ಅಡಮಾನ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಚಿನ್ನ ಮೌಲ್ಯಮಾಪಕ ರವಿಕುಮಾರ್ ಈ ವಂಚನೆಯ ಸೂತ್ರಧಾರಿಯಾಗಿದ್ದು, ನಾಲ್ವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿಕುಮಾರ್ ಹಲವು ನಕಲಿ ಗ್ರಾಹಕರೊಂದಿಗೆ ಸೇರಿಕೊಂಡು ನಕಲಿ ಚಿನ್ನವನ್ನು ಅಸಲಿ ಚಿನ್ನ ಎಂದು ಹೇಳಿ ಬ್ಯಾಂಕ್‌ಗೆ ವಂಚಿಸಿದ್ದಾನೆ. ಚಿನ್ನ ಮೌಲ್ಯಮಾಪಕ ರವಿಕುಮಾರ್ ಬ್ಯಾಂಕ್‌ಗೆ ಸಲ್ಲಿಸಿದ ನಕಲಿ ಚಿನ್ನವನ್ನು ಅಡಮಾನವಾಗಿ ಇಟ್ಟು, ನಕಲಿ ಗ್ರಾಹಕರಿಗೆ ಸಾಲ ನೀಡುವಂತೆ ಮಾಡಿದ್ದಾನೆ. ಈ ಮೂಲಕ ಬ್ಯಾಂಕ್‌ಗೆ ಮೋಸ ಮಾಡಿದ್ದಾನೆ. ಈತನ ಮೇಲೆ ಅನುಮಾನ ಬಂದು ಪರಿಶೀಲಿಸಿದಾಗ ನಕಲಿ ಚಿನ್ನದ ಕಳ್ಳಾಟ ಬಯಲಾಗಿದೆ. ಸದ್ಯ ಪೊಲೀಸರು ರವಿಕುಮಾರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವರದಿ: ವಿಕಾಸ್ ಕ್ರೈಂ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
