ಬೆಂಗಳೂರಿನ ಲಾಲ್ ಬಾಗ್ನಲ್ಲಿ ಫ್ಲವರ್ ಶೋ -ಕೆಂಗಲ್ ಹನುಮಂತಯ್ಯನವರ ಜೀವನ ದರ್ಶನ: ಟಿವಿ9 ನಲ್ಲಿ ಲೈವ್ ನೋಡಿ
Lalbagh Flower Show: ಶುಕ್ರವಾರದಿಂದ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರಿಗೆ ಪ್ಲವರ್ ಶೋ ವೀಕ್ಷಣೆಗೆ ಅವಕಾಶ ನೀಡಲಾಗಿದೆ. 14 ಅಡಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯನ್ನ ನಿಲ್ಲಿಸಿದ್ದು, ಸತ್ಯಾಗ್ರಹ ಸ್ಮಾರಕ ಜನರ ಗಮನ ಸೆಳೆಯುತ್ತಿದೆ.
ಬೆಂಗಳೂರಿನಲ್ಲಿರುವ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ನಿನ್ನೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಫ್ಲವರ್ ಶೋ ಉದ್ಘಾಟನೆ ಮಾಡಿದ್ರು. ಈ ವೇಳೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿ ಹಲವರು ಉಪಸ್ಥಿತರಿದ್ರು. ವಿಧಾನಸೌಧ ಈ ಬಾರಿಯ ಫ್ಲವರ್ ಶೋ ಆಕರ್ಷಣೆ – ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರೋ ಫ್ಲವರ್ ಶೋನಲ್ಲಿ ಈ ಬಾರಿ ವಿಧಾನಸೌಧ, ವಿಧಾನ ಸೌಧ ಮುಂದೆ ಇರುವ ಕೆಂಗಲ್ ಹನುಮಂತಯ್ಯ ನವರ ಪ್ರತಿಮೆ, ಪ್ರತಿಮೆಯ ಪಕ್ಕದಲ್ಲಿಯೇ ಇರುವ ಸತ್ಯಾಗ್ರಹ ಮಂಟಪ ಗಮನ ಸೆಳೆಯುತ್ತಿದೆ. ವಿಧಾನ ಸೌಧ ಹಾಗೂ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್‌ನಲ್ಲಿ ಫ್ಲವರ್ ಶೋ ಮೂಡಿ ಬಂದಿದೆ.
ಆಗಸ್ಟ್ 15ರವರೆಗೂ ನಡೆಯಲಿರುವ ಫ್ಲವರ್ ಶೋ
ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಫಲ ಪುಷ್ಪ ಪ್ರದರ್ಶನ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು 214ನೇ ಫ್ಲವರ್ ಶೋ ಆಗಿದೆ.. ಆಗಸ್ಟ್ ೧೫ ರ ತನಕ ಫ್ಲವರ್ ಶೋ ನಡೆಯಲಿದೆ. ಈ ಬಾರಿಯ ವಿಶೇಷ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ನವರ ಥೀಮ್ ಆಗಿದೆ ಎಂದರು.
ಲಾಲ್‌ಬಾಗ್ ಶುಚಿತ್ವದ ಉದ್ಯಾನ ಅಂತಾ ಸಿಎಂ ಬಣ್ಣನೆ
ಲಾಲ್ ಬಾಗ್ ಶುಚಿತ್ವದ ಉದ್ಯಾನವನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಲಾಲ್‌ಭಾಗ್ 140 ಎಕರೆ ವಿಸ್ತಿರ್ಣ ಇರೋ ಉದ್ಯಾನವನವಾಗಿದೆ. ಇಲ್ಲಿ ಎಲ್ಲ ಮರಗಿಡಗಳು ಇವೆ.. ಕೆಂಗಲ್ ಹನುಮಂತಯ್ಯ ಅವ್ರು 40 ಎಕರೆ ಅಕ್ವೈರ್ ಮಾಡಿ ಲಾಬ್ ವಿಸ್ತೀರ್ಣ ಹೆಚ್ಚಿಸಿದ್ರು ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು.
ಲಾಲ್‌ಬಾಗ್ ಫ್ಲವರ್ ಶೋ ಟಿವಿ9 ನಲ್ಲಿ ಲೈವ್ ನೋಡಿ – ಇಲ್ಲಿ ಕ್ಲಿಕ್ ಮಾಡಿ
3.5ಲಕ್ಷ ಹೂಗಳಿಂದ ವಿಧಾನಸೌಧ ಮಾದರಿ ನಿರ್ಮಾಣ
ಶುಕ್ರವಾರದಿಂದ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರಿಗೆ ಪ್ಲವರ್ ಶೋ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ವಿಧಾನಸೌಧ ಪ್ರತಿಮೆಯನ್ನು ಒಟ್ಟು 3.5 ಲಕ್ಷ ಬಗೆಬಗೆಯ ಹೂವುಗಳಿಂದ ನಿರ್ಮಿಸಲಾಗಿದೆ. 14 ಅಡಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯನ್ನ ನಿಲ್ಲಿಸಿದ್ದು, ಸತ್ಯಾಗ್ರಹ ಸ್ಮಾರಕ ಜನರ ಗಮನ ಸೆಳೆಯುತ್ತಿದೆ.
ಕೆಂಗಲ್ ಹನುಮಂತಯ್ಯನವರ ಜೀವನ ದರ್ಶನ
ಫ್ಲವರ್ ಶೋ ನಲ್ಲಿ ಕೆಂಗಲ್ ಹನಮಂತಯ್ಯನವರು ಬೆಳೆದುಬಂದ ಹಾದಿ, ರಾಜಕೀಯ ಸವಾಲು, ಹೋರಾಟದ ದಿನಗಳನ್ನ ಲಾಲ್ ಬಾಗ್‌ನಾ ಗಾಜಿನ ಮನೆಯಲ್ಲಿ ಅದ್ಭುತವಾಗಿ ಅನಾವರಣಗೊಳಿಸಲಾಗಿದೆ. ಒಟ್ಟು 17 ಲಕ್ಷ ಹೂಗಳಿಂದ ಫ್ಲವರ್ ಶೋ ಮಾಡಲಾಗಿದೆ. ಕೊಲ್ಕತ್ತಾ, ಪುಣೆ, ಆಂಧ್ರ, ಊಟಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸ್ವದೇಶಿ ಹೂವುಗಳು ಫ್ಲವರ್ ಶೋನಲ್ಲಿ ಕಣ್ಮನ ಸೆಳೆಯುತ್ತಿವೆ.
ಫ್ಲವರ್ ಶೋ ವೀಕ್ಷಿಸಲು ಮುಗಿಬಿದ್ದ ಜನ
ಫ್ಲವರ್ ಶೋ ಉದ್ಘಾಟನೆಯಾಗುತ್ತಿದ್ದಂತೆ ಸಾಕಷ್ಟು ಮಂದಿ ಲಾಲ್‌ಬಾಗ್‌ಗೆ ಮುಗಿಬಿದ್ದಿದ್ದಾರೆ. ಹೂವಿನಿಂದ ಕಂಗೊಳಿಸುತ್ತಿದ್ದ ವಿಧಾನಸೌಧ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಲಕ್ಷಾಂತರ ಜನರು ಫ್ಲವರ್ ಶೋಗೆ ಬರುವ ಸಾಧ್ಯತೆಯಿದ್ದು, ಲಾಲ್‌ಬಾಗ್ ಸುತ್ತ-ಮುತ್ತಾ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.