ಸಫಾರಿಗೆ ಬಂದಿದ್ದ ಮಹಿಳೆ ಮೇಲೆ ಕಣ್​ ಹಾಕಿದ ಚಿರತೆ: ಏಕಾಏಕಿ ಅಟ್ಯಾಕ್​​, ಜಸ್ಟ್​ ಮಿಸ್​​!

Updated By: ಗಂಗಾಧರ​ ಬ. ಸಾಬೋಜಿ

Updated on: Nov 13, 2025 | 4:25 PM

ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. KSTDC ವಾಹನದಲ್ಲಿ ಸಫಾರಿಗೆ ಹೋಗಿದ್ದಾಗ ಚಿರತೆ ದಾಳಿ ಮಾಡಿದೆ. ಸದ್ಯ ಗಾಯಗೊಂಡ ಮಹಿಳೆಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಡಿಯೋ ನೋಡಿ.

ಆನೇಕಲ್, ನವೆಂಬರ್​ 13: ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ. ಚೆನ್ನೈ ಮೂಲದ ವಹಿತ ಬಾನು (50) ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಪತಿ ಮತ್ತು ಮಗನ ಜತೆ ವಹಿತ ಬಾನು ಬನ್ನೇರುಘಟ್ಟ ಸಫಾರಿಗೆ ಬಂದಿದ್ದರು.  KSTDC ವಾಹನದಲ್ಲಿ ಸಫಾರಿಗೆ ತೆರಳಿದ್ದು, ವಾಹನದ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದರು. ಈ ವೇಳೆ  ವಾಹನದ ಮೇಲೆ ಎಗರಿ ವಹಿತ ಬಾನು ಕೈಗೆ ಚಿರತೆ ದಾಳಿ ಮಾಡಿದೆ. ಗಾಯಾಳು ಮಹಿಳೆಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 13, 2025 04:18 PM