AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rising Stars Asia Cup 2025: ಕತಾರ್​ಗೆ ಹಾರಿದ ಭಾರತ ಯುವ ಪಡೆ; ವಿಡಿಯೋ

Rising Stars Asia Cup 2025: ಕತಾರ್​ಗೆ ಹಾರಿದ ಭಾರತ ಯುವ ಪಡೆ; ವಿಡಿಯೋ

ಪೃಥ್ವಿಶಂಕರ
|

Updated on: Nov 13, 2025 | 5:22 PM

Share

Rising Star Asia Cup 2025: 2025ರ ರೈಸಿಂಗ್ ಸ್ಟಾರ್ ಏಷ್ಯಾಕಪ್ ನವೆಂಬರ್ 14ರಂದು ದೋಹಾದಲ್ಲಿ ಆರಂಭವಾಗಲಿದ್ದು, ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡ ಪ್ರಯಾಣ ಬೆಳೆಸಿದೆ. ವೈಭವ್ ಸೂರ್ಯವಂಶಿ ಸೇರಿದಂತೆ ಪ್ರಮುಖ ಆಟಗಾರರನ್ನೊಳಗೊಂಡ ತಂಡ, ಯುಎಇ, ಪಾಕಿಸ್ತಾನ ಮತ್ತು ಒಮಾನ್ ವಿರುದ್ಧ ಪೈಪೋಟಿ ನಡೆಸಲಿದೆ. ನವೆಂಬರ್ 14ಕ್ಕೆ ಯುಎಇ ವಿರುದ್ಧ ಮೊದಲ ಪಂದ್ಯ ನಡೆಯಲಿದ್ದು, ಬಿಸಿಸಿಐ ತಂಡದ ವಿಡಿಯೋ ಹಂಚಿಕೊಂಡಿದೆ.

2025 ರ ರೈಸಿಂಗ್ ಸ್ಟಾರ್ ಏಷ್ಯಾಕಪ್ ನವೆಂಬರ್ 14 ರಂದು ಕತಾರ್‌ನ ದೋಹಾದಲ್ಲಿ ಪ್ರಾರಂಭವಾಗಲಿದೆ. ಹೀಗಾಗಿ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಿಲಕ್ ವರ್ಮಾ ನೇತೃತ್ವದ ಭಾರತ ಯುವ ತಂಡ ದೋಹಾಗೆ ಪ್ರಯಾಣ ಬೆಳೆಸಿದೆ. ಈ ತಂಡದಲ್ಲಿ ಯುವ ಸ್ಟಾರ್ ವೈಭವ್ ಸೂರ್ಯವಂಶಿ ಸೇರಿದಂತೆ ಭಾರತದ ಎ ತಂಡ ಈ ಪಂದ್ಯಾವಳಿಯಲ್ಲಿ ಆಡಲಿದೆ. ಇದೀಗ ತಂಡ ದೋಹಾಗೆ ತೆರಳಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಭಾರತದ ವೇಳಾಪಟ್ಟಿ

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಭಾರತ ಎ ತಂಡವು ಒಮಾನ್, ಯುಎಇ ಮತ್ತು ಪಾಕಿಸ್ತಾನ ಎ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ತಂಡವು ನವೆಂಬರ್ 14 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ನಂತರ ನವೆಂಬರ್ 16 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ನಂತರ ನವೆಂಬರ್ 18 ರಂದು ಒಮಾನ್ ತಂಡವನ್ನು ಎದುರಿಸಲಿದೆ. ನಂತರ ಎರಡು ಸೆಮಿಫೈನಲ್ ಪಂದ್ಯಗಳು ನವೆಂಬರ್ 21 ರಂದು ನಡೆಯಲಿದ್ದು, ಫೈನಲ್ ನವೆಂಬರ್ 23 ರಂದು ನಡೆಯಲಿದೆ.

ಭಾರತ ಎ ತಂಡ: ಜಿತೇಶ್ ಶರ್ಮಾ (ನಾಯಕ/ವಿಕೆಟ್-ಕೀಪರ್), ನಮನ್ ಧೀರ್ (ಉಪನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಾಕ್, ಯುದ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಸುಯಶ್ ಶರ್ಮಾ.

ಸ್ಟ್ಯಾಂಡ್‌ಬೈ ಆಟಗಾರರು: ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಜ್ವಿ, ಶೇಕ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ