ಬೆಂಗಳೂರು: ಸಾಲ ಸಿಗದ್ದಕ್ಕಾಗಿ ಗಿಫ್ಟ್ ಸಿಕ್ಕ ಬೈಕ್ ಅನ್ನು ತಾನೇ ಸುಟ್ಟು ಹಾಕಿದ ಯುವಕ
ಬೆಂಗಳೂರಿನ ಬಸವೇಶ್ವರನಗರ ವ್ಯಾಪ್ತಿಯ ಹಾವನೂರು ಸರ್ಕಲ್‌ನಲ್ಲಿ ಯಶವಂತ್ ಎಂಬಾತ ತನ್ನ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಗಿಫ್ಟ್ ಆಗಿ ಸಿಕ್ಕಿದ ಬೈಕ್ ಅನ್ನು ಕೋಪದಿಂದ ಸುಟ್ಟು ಹಾಕಿದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಗಳೂರು, ನವೆಂಬರ್ 10: ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಬೈಕ್ಗೆ ಬೆಂಕಿ ಇಟ್ಟ ಘಟನೆ ನಡೆದಿದ್ದು, ಆರೋಪಿ ಯಶವಂತ್ನನ್ನು ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನ ವಿಚಾರಣೆ ನಡೆಸಿದಾಗ ಸಾಲ ಸಿಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ.
ಯಶವಂತ್‌ಗೆ ಗಿಫ್ಟ್ ಆಗಿ ಸಿಕ್ಕಿದ ಬೈಕ್ ಅನ್ನು ಕೋಪದಿಂದ ತಾನೇ ಸುಟ್ಟುಹಾಕಿದ ಶಂಕೆ ವ್ಯಕ್ತವಾಗುತ್ತಿದೆ. ಈತ ನಡು ರಸ್ತೆಯಲ್ಲಿ ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರೂ, ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸವೇಶ್ವರನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿ ಯಶವಂತ್‌ಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 10, 2025 02:50 PM
