ಬಿಗ್ ಬಾಸ್ ಎಕ್ಸಿಟ್ಗೆ ಕಾರಣ ಏನು? ಟಿವಿ9 ಸಂದರ್ಶನದಲ್ಲಿ ಚಂದ್ರಪ್ರಭ ಹೇಳಿದ್ದಿಷ್ಟು
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಚಂದ್ರಪ್ರಭ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಷ್ ಆಗಲು ಕಾರಣ ಏನು ಎಂಬುದು ಎಲ್ಲರಿಗೂ ತಿಳಿದಿಲ್ಲ. ಈ ಬಗ್ಗೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಚಂದ್ರಪ್ರಭ ಅವರು ಎಲಿಮಿನೇಟ್ ಆದರು. ಕಡಿಮೆ ವೋಟ್ ಪಡೆದು ಚಂದ್ರಪ್ರಭ ಅವರು ದೊಡ್ಮನೆಯಿಂದ ಹೊರ ಬಂದರು ಎಂದು ಹೇಳಲು ಸಾಧ್ಯವಿಲ್ಲ. ಅವರಿಗೆ ಬಿಗ್ ಬಾಸ್ನಿಂದ ಹೊರ ಬರಬೇಕು ಎಂದು ಅನಿಸುತ್ತಾ ಇತ್ತಂತೆ. ವೀಕೆಂಡ್ ಎಲಿಮಿನೇಷನ್ನಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದು ಚಂದ್ರಪ್ರಭ ಹಾಗೂ ಸುಧಿ. ಸುಧಿ ವಿಶೇಷ ಅಧಿಕಾರ ಬಳಸಿ ಉಳಿದುಕೊಂಡರು. ಚಂದ್ರಪ್ರಭ ಬಯಸಿದಂತೆ ಎಲಿಮಿನೇಟ್ ಆದರು. ‘ಒಂದು ವಾರದಿಂದ ಹೊರ ಬರಬೇಕು ಎಂದು ಅನಿಸುತ್ತಲೇ ಇತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳ್ತೀನಿ ಎಂದರು’ ಚಂದ್ರಪ್ರಭ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
