‘ನಾನು ಜೈಲಿಗೆ ಹೋಗಿ ಬಂದವನು’; ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬೆಂಗಳೂರಿನ ಪೀಣ್ಯ ಎಚ್‌ಎಂಟಿ ಲೇಔಟ್‌ನ ರಥನ್ ಬೇಕರಿಯಲ್ಲಿ ಉಚಿತವಾಗಿ ಟೀ-ಕಾಫಿ ನೀಡುವಂತೆ ಆಗ್ರಹಿಸಿ ರೌಡಿಗಳಿಬ್ಬರು ಪುಂಡಾಟ ನಡೆಸಿದ್ದಾರೆ. ಮಹಿಳಾ ಮಾಲೀಕರಿಗೆ ಜೀವ ಬೆದರಿಕೆ ಹಾಕಿ, ಅಂಗಡಿಯಲ್ಲಿದ್ದ ಗಾಜಿನ ಬಾಟಲಿಗಳನ್ನು ಒಡೆದು ಹಾನಿ ಎಸಗಿದ್ದಾರೆ. ಈ ಸಂಬಂಧ ಮಹೇಶ್ ಹಾಗೂ ರಜತ್ ಎಂಬಿಬ್ಬರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 28: ನಗರದ ಪೀಣ್ಯ ಎಚ್‌ಎಂಟಿ ಲೇಔಟ್‌ನ ರಥನ್ ಬೇಕರಿಯಲ್ಲಿ ನಿನ್ನೆ ರಾತ್ರಿ ಕಿಡಿಗೇಡಿಗಳು ಪುಂಡಾಟ ನಡೆಸಿದ್ದಾರೆ. “ನಾನು ಜೈಲಿಗೆ ಹೋಗಿ ಬಂದ ರೌಡಿ, ನನಗೆ ಹಾಗೂ ನನ್ನ ಹುಡುಗರಿಗೆ ಉಚಿತವಾಗಿ ಟೀ-ಕಾಫಿ ನೀಡಬೇಕು” ಎಂದು ಮಹೇಶ್ ಮತ್ತು ರಜತ್ ಎಂಬಿಬ್ಬರು ಅವಾಜ್ ಹಾಕಿದ್ದಾರೆ.
ಅಂಗಡಿಯಲ್ಲಿದ್ದ ಮಾಲಕಿಗೆ ಗಾಜಿನ ಬಾಟಲಿಗಳಿಂದ ಬೆದರಿಸಿ, ಕುಟುಂಬ ಸಮೇತ ಜೀವ ಸಹಿತ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಬೇಕರಿಯಲ್ಲಿದ್ದ ಸಾಮಗ್ರಿಗಳನ್ನು ಜಖಂಗೊಳಿಸಿ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರ ದೂರಿನನ್ವಯ ಪೀಣ್ಯ ಪೊಲೀಸ್ ಠಾಣೆಯಲ್ಲಿ ಮಹೇಶ್ ಹಾಗೂ ರಜತ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us

