Bengaluru Rain Effect: ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆನೀರು! ವಾಹನ ಸವಾರರ ಪರದಾಟ
ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯು ಮತ್ತೆ ಅವಾಂತರ ಸೃಷ್ಟಿಸಿದೆ. ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ, ಬನ್ನೇರಘಟ್ಟ ರಸ್ತೆಯಲ್ಲಿ ಎರಡರಿಂದ ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ. ನಿನ್ನೆ ರಾತ್ರಿ 7 ಗಂಟೆಗೆ ಸುರಿದ ಮಳೆಯ ಪರಿಣಾಮವಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಧ್ಯರಾತ್ರಿ ಕಳೆದರೂ ನೀರು ಇಳಿದಿಲ್ಲ. ಬನ್ನೇರಘಟ್ಟದಿಂದ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರಿನಿಂದ ಬನ್ನೇರಘಟ್ಟಕ್ಕೆ ಹೋಗುವ ಎರಡೂ ರಸ್ತೆಗಳಲ್ಲೂ ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಬೆಂಗಳೂರು, ಮೇ 29: ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯು ಮತ್ತೆ ಅವಾಂತರ ಸೃಷ್ಟಿಸಿದೆ. ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ, ಬನ್ನೇರಘಟ್ಟ ರಸ್ತೆಯಲ್ಲಿ ಎರಡರಿಂದ ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ. ನಿನ್ನೆ ರಾತ್ರಿ 7 ಗಂಟೆಗೆ ಸುರಿದ ಮಳೆಯ ಪರಿಣಾಮವಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಧ್ಯರಾತ್ರಿ ಕಳೆದರೂ ನೀರು ಇಳಿದಿಲ್ಲ.
ಬನ್ನೇರಘಟ್ಟದಿಂದ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರಿನಿಂದ ಬನ್ನೇರಘಟ್ಟಕ್ಕೆ ಹೋಗುವ ಎರಡೂ ರಸ್ತೆಗಳಲ್ಲೂ ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ವಾಹನ ಸವಾರರು ಅಪಾಯದ ನಡುವೆಯೂ ಸಂಚಾರಕ್ಕೆ ಪ್ರಯತ್ನಿಸುತ್ತಿದ್ದು, ಹಲವು ವಾಹನಗಳು ನೀರಲ್ಲಿ ಸಿಲುಕಿ ಕೆಟ್ಟು ನಿಂತಿವೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.


