ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ಕೊನೆಗೂ ತಂಪೆರೆದ ಮಳೆರಾಯ
ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ಮಳೆರಾಯ(Bengaluru Rain) ತಂಪೆರೆದಿದ್ದಾನೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಬ್ಬನ್ ಪಾರ್ಕ್, ವಿಧಾನಸೌಧ, ಶಾಂತಿನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಇನ್ನು ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಹಲವು ಕಡೆ ಮೊದಲ ಮಳೆಯ ಸಿಂಚನವಾಗಿದೆ.
ಬೆಂಗಳೂರು, ಮೇ.02: ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ಮಳೆರಾಯ(Bengaluru Rain) ತಂಪೆರೆದಿದ್ದಾನೆ. ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಬ್ಬನ್ ಪಾರ್ಕ್, ವಿಧಾನಸೌಧ, ಶಾಂತಿನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.ಇನ್ನು ಹಲವೆಡೆ ಮೋಡ ಕವಿದ ವಾತಾವರಣವಿದ್ದು, ರಾತ್ರಿ ವೇಳೆಗೆ ಜೋರು ಮಳೆ ಸಾಧ್ಯತೆಯಿದೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು. ಇದೀಗ ಬಿಸಿಲಿನ ಬೆಗೆಯಿಂದ ಬೇಸತ್ತ ಜನರಿಗೆ ವರುಣದೇವ ದರ್ಶನ ನೀಡಿದ್ದಾನೆ.
ಹಲವು ಕಡೆ ಮೊದಲ ಮಳೆ ಆರಂಭ
ಇನ್ನು ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಹಲವು ಕಡೆ ಮೊದಲ ಮಳೆ ಆರಂಭವಾಗಿದ್ದು,
ಮಳೆಯಿಂದಾಗಿ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಇದರ ಮಧ್ಯೆ ದಿಢೀರ್ ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದು, ಮಳೆಯಲ್ಲೇ ಮನೆ ಕಡೆ ತೆರಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ