AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rain: ಬೆಂಗಳೂರಿನ ಹಲವೆಡೆ ಜೋರು ಮಳೆ, ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಕೂಲ್ ಕೂಲ್

Bangalore Weather Rain Report: ಕಾದುಕೆಂಡವಾಗಿದ್ದ ಸಿಲಿಕಾನ್​ ಸಿಟಿಯ ಕೆಲವೆಡೆ ವರುಣನ ಆಗಮನವಾಗಿದೆ. ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ನಗರದ ಫ್ರೇಜರ್ ಟೌನ್​, ರಿಚ್ಮಂಡ್ ಟೌನ್​ ಸೇರಿದಂತೆ ಹಲವೆಡೆ  ದಿಢೀರ್​ ಮಳೆಯಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

Bengaluru Rain: ಬೆಂಗಳೂರಿನ ಹಲವೆಡೆ ಜೋರು ಮಳೆ, ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಕೂಲ್ ಕೂಲ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:May 02, 2024 | 7:34 PM

ಬೆಂಗಳೂರು, ಮೇ.02: ಕಾದುಕೆಂಡವಾಗಿದ್ದ ಸಿಲಿಕಾನ್​ ಸಿಟಿಯ ಕೆಲವೆಡೆ ವರುಣನ ಆಗಮನವಾಗಿದೆ. ಮನೆಯಿಂದ ಹೊರಬರದಂತಹ ಸ್ಥಿತಿ ತಲುಪಿದ್ದ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆ(Rain)ಯಾಗಿದೆ. ಇದರಿಂದ ಮಹಾನಗರ ಕೊಂಚ ಮಟ್ಟಿಗೆ ಕೂಲ್​ ಆಗಿದೆ. ಇನ್ನು ನಗರದ ಫ್ರೇಜರ್ ಟೌನ್​, ರಿಚ್ಮಂಡ್ ಟೌನ್​ ಸೇರಿದಂತೆ ಹಲವೆಡೆ  ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಇನ್ನು ರಾಜ್ಯದಲ್ಲಿ ಕೆಲವು ದಿನಗಳ ಕಾಲ ಬಿಸಿಗಾಳಿಯು ಮುಂದುವರೆಯಲಿದ್ದು, ಈ ಮಧ್ಯೆ ಏ.30 ರಿಂದ ಮೇ.03 ರ ನಡುವೆ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿತ್ತು. ಅದರಂತೆ ಇಂದು(ಮೇ.02) ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್ ಸುತ್ತಮುತ್ತ ತುಂತುರು ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದ್ದು, ಸಂಜೆಯಾಗ್ತಿದ್ದಂತೆ ಮೋಡ ದಟ್ಟವಾಗುತ್ತಿದೆ. ಈ ಹಿನ್ನಲೆ ರಾತ್ರಿ ವೇಳೆಗೆ ಜೋರು ಮಳೆ ಬರುವ ಸಾಧ್ಯತೆಯಿದೆ.

ಇದನ್ನೂ ಓದಿ:ರಣ ಬಿಸಿಲಿಂದ ಬಸವಳಿದಿದ್ದ ಕೋಲಾರದ ಕೆಜಿಎಫ್ ನಲ್ಲಿ ಮಳೆಯ ಸಿಂಚನ, ಜನರಲ್ಲಿ ಕೊಂಚ ನಿರಾಳತೆ

ಹಲವು ಕಡೆ ಮೊದಲ ಮಳೆ ಆರಂಭ

ಇನ್ನು ಬೆಂಗಳೂರಿನ ಪೀಣ್ಯಾ,ದಾಸರಹಳ್ಳಿ,ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಸವನಗುಡಿ, ಗಾಂಧಿ ಬಜಾರ್​ ಸೇರಿದಂತೆ ಹಲವು ಕಡೆ ವರ್ಷದ ಮೊದಲ ಮಳೆ ಆರಂಭವಾಗಿದೆ. ಮಳೆಯಿಂದಾಗಿ ಜನರ ಮುಖದಲ್ಲಿ ಮಂದಹಾಸ ಮೂಡಿದ್ದು, ಮಳೆಯಲ್ಲಿ ಮಕ್ಕಳು ಮಿದೆದಿದ್ದಾರೆ. ಇತ್ತ ಮಳೆಯಲ್ಲೇ ವಾಹನ ಸವಾರರು ಮನೆ ಕಡೆ ತೆರಳಿದ್ದಾರೆ.

ಚಿನ್ನದ ನಾಡಲ್ಲಿ‌ ಮಳೆಯ ಸಿಂಚನ

ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೆ, ಇತ್ತ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ‌ ಮಳೆಯ ಸಿಂಚನವಾಗಿದೆ. ಬಿಸಿಗಾಳಿ, ಒಣ ಹವೆಯಿಂದ ಬೇಸತ್ತು ಹೋಗಿದ್ದ ವಾತಾವರಣ ತಣ್ಣಗಾಗಿದೆ. ಕಳೆದೊಂದು ವರ್ಷದಿಂದ ಮಳೆ ಕಾಣದೆ ಬರಡಾಗಿ ಹೋಗಿದ್ದ ಭೂಮಿ, ಇದ್ದಕ್ಕಿದ್ದಂತೆ ಸುರಿದ ಮಳೆ‌‌ ಹನಿಗೆ ತಂಪಾಗಿದೆ.  ಮಳೆ‌ ಹನಿ ಕಂಡು ಕೆಜಿಎಫ್ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Thu, 2 May 24