ಮಳೆ ಕೊರತೆ, ತಾಪಮಾನ ಹೆಚ್ಚಳ: ಬತ್ತಿ ಹೋಗುತ್ತಿದೆ ಬೆಂಗಳೂರಿನ ಪ್ರಸಿದ್ಧ ಸ್ಯಾಂಕಿ ಕೆರೆ!

ಕೆರೆಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಜೀವ ರಾಶಿಗಳಿಗೆ ಉತ್ತಮ ಆಶ್ರಯ ತಾಣವಾಗುತ್ತವೆ. ಪರಿಶುದ್ಧ ಹಾಗೂ ನಿರ್ಮಲ ಪರಿಸರಕ್ಕೆ ಸಹಾಕಾರಿಯಾಗಿವೆ. ಅಲ್ಲದೆ ಹಿತಕರ, ಆನಂದಮಯ ಅನುಭೂತಿಯನ್ನೂ ಒದಗಿಸುತ್ತವೆ. ಆದರೆ ಬೆಂಗಳೂರಿನಲ್ಲಿ ಕರೆಗಳು ಕಣ್ಮರೆಯಾಗುತ್ತಿವೆ. ಅದೆಷ್ಟೊ ಕೆರಗಳು ಮಾಯವಾಗಿವೆ. ನೀರಿಲ್ಲದೆ ಒಣಗಿ ಹೋಗಿವೆ. ಈ ಸಾಲಿಗೆ ಪ್ರಸಿದ್ಧ ಸ್ಯಾಂಕಿ ಕೆರೆ ಕೂಡ ಸೇರುತ್ತಾ? ಎಂಬ ಆತಂಕ ಬೆಂಗಳೂರಿಗರಲ್ಲಿ ಮೂಡಿದೆ.

ಮಳೆ ಕೊರತೆ, ತಾಪಮಾನ ಹೆಚ್ಚಳ: ಬತ್ತಿ ಹೋಗುತ್ತಿದೆ ಬೆಂಗಳೂರಿನ ಪ್ರಸಿದ್ಧ ಸ್ಯಾಂಕಿ ಕೆರೆ!
ಸ್ಯಾಂಕಿ ಕೆರೆ
Follow us
| Updated By: ವಿವೇಕ ಬಿರಾದಾರ

Updated on: Apr 30, 2024 | 8:09 AM

ಬೆಂಗಳೂರು ಏಪ್ರಿಲ್​ 30: ಬೆಂಗಳೂರು (Bengaluru) ಮೊದಲು ಕೆರೆಗಳ (Lake) ನಗರ ಎಂದೆ ಪ್ರಸಿದ್ಧಿ ಪಡೆದಿತ್ತು. ಸುಮಾರು 250 ಕ್ಕೂ ಹೆಚ್ಚು ಕೆರೆಗಳು ಬೆಂಗಳೂರು ಪಟ್ಟಣದಲ್ಲಿದ್ದವು. ಆದರೆ ಕಾಲಕ್ರಮೇಣ ಮನುಜನ ಸ್ವಾರ್ಥಕ್ಕೆ ಕೆರೆಗಳು ಬಲಿಪಶುವಾಗಿದ್ದು ದುರದೃಷ್ಟಕರ. ಉಳಿದಿರುವ ಕೆರೆಗಳನ್ನಾದರೂ ಸಂರಕ್ಷಣೆ ಮಾಡಬೇಕಾಗಿರುವುದು ಅತ್ಯಗತ್ಯವಾಗಿದೆ. ಇದೀಗ ಇರುವ ಕೆರೆಗಳು ಕೂಡ ಬೆಂಗಳೂರಿನ ತಾಪಮಾನದಿಂದ ಬತ್ತಿಹೋಗುತ್ತಿವೆ.

ಹೌದು ಕೆರೆಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಜೀವ ರಾಶಿಗಳಿಗೆ ಉತ್ತಮ ಆಶ್ರಯ ತಾಣವಾಗುತ್ತವೆ. ಪರಿಶುದ್ಧ ಹಾಗೂ ನಿರ್ಮಲ ಪರಿಸರಕ್ಕೆ ಸಹಾಕಾರಿಯಾಗಿವೆ. ಅಲ್ಲದೆ ಹಿತಕರ, ಆನಂದಮಯ ಅನುಭೂತಿಯನ್ನೂ ಒದಗಿಸುತ್ತವೆ. ಹಾಗೆ ಸಮಯವಿದ್ದರೆ, ಮನಸ್ಸು ಒತ್ತಡದಲ್ಲಿದ್ದರೆ, ಬೇಸರ ಮೂಡಿದ್ದರೆ ಇಲ್ಲವೆ ಪುಟ್ಟ ಮಕ್ಕಳಿಗೆ ಸಂತಸದ ಕ್ಷಣಗಳನ್ನು ನೀಡಲು ಬಯಸಿದರೆ ಒಂದೊಮ್ಮೆ ಕೆರೆಗೆ ಭೇಟಿ ನೀಡಿ. ಅಲ್ಲಿನ ಪ್ರಶಾಂತ ಪರಿಸರ, ನಿರ್ಮಲ ವಾತಾವರಣ ನಿಮಗೆ ಹೇಳಲಾರದಷ್ಟು ಆನಂದವನ್ನುಂಟು ಮಾಡುತ್ತದೆ. ಇನ್ನೂ ಕೆರೆಯ ಪಕ್ಕದಲ್ಲೆ ಚಿಕ್ಕದೊಂದು ಉದ್ಯಾನವಿದ್ದರೆ, ಅಬ್ಬಾ ಸಂತೋಷ ಇಮ್ಮಡಿಗೊಳ್ಳುತ್ತದೆ. ಆದರೆ ಇದೀಗ ಅದೇ ಕೆರೆಗಳು ಕಾಣೆಯಾಗ್ತಿದೆ. ಬೆಂಗಳೂರಿನ ಸ್ಯಾಂಕಿ ಕೆರೆ ಕೂಡ ಮರೆಯಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿಲ ಬೇಗೆಯಿಂದ ಹೋಟೆಲ್ ಉದ್ಯಮಕ್ಕೂ ಹೊಡೆತ: ವಹಿವಾಟು ಶೇ 30ರಷ್ಟು ಕುಸಿತ

ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ದಶಕಗಳ ಇತಿಹಾಸ ಇರುವ ಕೆರೆಯೊಂದು ಬತ್ತುತ್ತಿರುವುದು ನಗರದಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಸಾಕ್ಷಿಯಾಗಿದೆ. 1874 ರಲ್ಲಿ ಬರಗಾಲದ ಸಮಯದಲ್ಲಿ ನೀರಿನ ಕೊರೆತೆಯನ್ನು ನೀಗಿಸಲು ಕರ್ನಲ್ ರಿಚರ್ಡ್ ಹಿರಾಮ್ ಸ್ಯಾಂಕಿ ಅವರು 1882ರಲ್ಲಿ ಸ್ಯಾಂಕಿ ಟ್ಯಾಂಕ್ ಕೆರೆಯನ್ನು ನಿರ್ಮಿಸಿದರು. ದಶಕಗಳ ಕಾಲ ಬೆಂಗಳೂರು ಉತ್ತರ ಭಾಗದಲ್ಲಿನ ಜನರಿಗೆ ಕುಡಿಯುವ ನೀರಿಗೆ ಇದೇ ಕೆರೆ ಆಧಾರವಾಗಿತ್ತು. ಆದರೆ ದಿನಗಳು ಕಳೆದಂತೆ ಈ ಕೆರೆಯ ನೀರಿನ ಬಳಕೆಯನ್ನು ನಿಲ್ಲಿಸಲಾಗಿತ್ತು. ಈ ಭಾಗದಲ್ಲಿನ ಅಂತರ್ಜಲ ಮಟ್ಟ ಸ್ಥಿರತೆಗೆ ನೆರೆವಾಗಿದ್ದ ಸ್ಯಾಂಕಿ ಟ್ಯಾಂಕ್ ಕೆರೆ ಇದೀಗ ಬಹುತೇಕ ಒಣಗಿ ಹೋಗಿದೆ.

ನಗರದ ಐಐಎಸ್‌ಸಿ, ಸದಾಶಿವನಗರ ಹಾಗೂ ನೆರೆಯ ಪ್ರದೇಶಗಳಲ್ಲಿ ಬೀಳುವ ಮಳೆಯ ನೀರು ಈ ಕೆರೆಗೆ ಆಶ್ರಯವಾಗಿದೆ. ಆದರೆ ಈ ಬಾರಿ ನಗರದಲ್ಲಿ ಅತ್ಯಲ್ಪ ಮಳೆ ಹಾಗೂ ಹೆಚ್ಚುತ್ತಿರುವ ತಾಪಮಾನದಿಂದಾಗಿ ಕೆರೆಯಲ್ಲಿನ ನೀರು ವೇಗವಾಗಿ ಆವಿಯಾಗುತ್ತಿದೆ. ಕೆರೆಯ ಸುತ್ತಮುತ್ತ ಇರುವ ಕಾಂಕ್ರೀಟ್ ಪ್ರದೇಶಗಳು ಹಾಗೂ ಬೋರ್‌ವೆಲ್‌ಗಳ ಮೂಲಕ ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವುದರಿಂದ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯದ ಜಲಾಶಯಗಳಲ್ಲಿ ಉಳಿದಿರುವುದು ಕೇವಲ 10% ನೀರು

ಒಟ್ಟಿನಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಾವಿರಾರು ಮಂದಿ ಇಲ್ಲಿ ವಾಕಿಂಗ್ ಮಾಡುತ್ತಾರೆ. ನೀರು ಇರುವ ಕಾರಣ ವಾತಾವರಣ ಕೂಲ್ ಆಗಿರುತ್ತದೆ. ಆದರೆ ಐತಿಹಾಸಿಕ ಕೆರೆ ಬತ್ತುತ್ತಿರುವುದು ವಾಯುವಿವಾರಿಗಳ ಬೇಸರಕ್ಕೆ ಕಾರಣವಾಗಿದೆ. ದಶಕಗಳ ಇತಿಹಾಸ ಇರುವ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುತ್ತಿರುವುದು ಬೇಸರ ತರೆಸಿರೋದಂತೂ ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು