ರಾಹುಲ್ ಗಾಂಧಿಯವರ ಬಗ್ಗೆ ಹಬ್ಬಿರುವ ಸುದ್ದಿಗಳನ್ನೆಲ್ಲ ಜನ ನಂಬಬೇಕಾ? ಸಿಟಿ ರವಿ
ರಾಹುಲ್ ಗಾಂಧಿಯವರು ಪ್ರಜ್ವಲ್ ಪ್ರಕರಣದ ಸತ್ಯಾಸತ್ಯತೆಗಳನ್ನು ಅರಿಯದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾದರೆ, ಅವರ ಬಗ್ಗೆಯೂ ಹಲವಾರು ಸಂಗತಿಗಳು ನಮ್ಮ ಕಿವಿಗೆ ಬಿದ್ದಿವೆ, ಅಮೇರಿಕಾದಲ್ಲಿ ಸಿಕ್ಕಿಬಿದ್ದಿದ್ದು ಮತ್ತು ಪ್ರತಿಬಾರಿ ವಿದೇಶಕ್ಕೆ ಬೇರೆ ಬೇರೆಯವರೊಂದಿಗೆ ಹೋಗಿದ್ದು-ಇವನ್ನೆಲ್ಲ ನಾವು ನಂಬಬೇಕಾ? ಎಂದು ರವಿ ಕೇಳಿದರು.
ಬೆಳಗಾವಿ: ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಸಿಟಿ ರವಿಯವರು (CT Ravi), 2019ರಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಸಂಸದರಾದಾಗ ಜೆಡಿಎಸ್ ಕಾಂಗ್ರೆಸ್ ಪಕ್ಷದ ಭಾಗವಾಗಿತ್ತು. ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಟೇಪುಗಳ (sex tapes) ಮರ್ಮ ಮತ್ತು ಸತ್ಯ ತನಿಖೆಯ ನಂತರವೇ ಹೊರಬೀಳಲಿದೆ, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೇಪುಗಳ ಅಧಾರದಲ್ಲಿ ಯಾವುದೇ ನಿರ್ಣಯಕ್ಕೆ ಬರಲಾಗದು. ದೇವರಾಜೇಗೌಡರು ತನ್ನ ಪಕ್ಕದ ಜಿಲ್ಲೆಯವರು, ಅವರು ತನ್ನನ್ನು ಭೇಟಿಯಾಗುತ್ತಿರುತ್ತಾರೆ ಆದರೆ ಯಾವತ್ತೂ ಈ ವಿಷಯವನ್ನು ತನ್ನೊಂದಿಗೆ ಪ್ರಸ್ತಾಪಿಸಿಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗದಂತೆ ತಡೆಯಲು ಸರ್ಕಾರದ ಮೇಲೆ ಯಾರದ್ದಾದರೂ ಒತ್ತಡವಿತ್ತೇ ಅನ್ನೋದನ್ನು ಸರ್ಕಾರ ಸ್ಪಷ್ಟಪಡಿಸಬೇಕು, ಸತ್ಯ ಏನು ಅನ್ನೋದನ್ನ ಜನತೆಯ ಮುಂದಿಡಬೇಕು, ಅದು ತನ್ನಿಂದಾಗದು ಅನ್ನೋದಾದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲಿ ಎಂದು ರವಿ ಹೇಳಿದರು.
ರಾಹುಲ್ ಗಾಂಧಿಯವರು ಪ್ರಜ್ವಲ್ ಪ್ರಕರಣದ ಸತ್ಯಾಸತ್ಯತೆಗಳನ್ನು ಅರಿಯದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾದರೆ, ಅವರ ಬಗ್ಗೆಯೂ ಹಲವಾರು ಸಂಗತಿಗಳು ನಮ್ಮ ಕಿವಿಗೆ ಬಿದ್ದಿವೆ, ಅಮೇರಿಕಾದಲ್ಲಿ ಸಿಕ್ಕಿಬಿದ್ದಿದ್ದು ಮತ್ತು ಪ್ರತಿಬಾರಿ ವಿದೇಶಕ್ಕೆ ಬೇರೆ ಬೇರೆಯವರೊಂದಿಗೆ ಹೋಗಿದ್ದು-ಇವನ್ನೆಲ್ಲ ನಾವು ನಂಬಬೇಕಾ? ಎಂದು ರವಿ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಮ್ಮ ಗಂಡು ನರೇಂದ್ರ ಮೋದಿ, ಕಾಂಗ್ರೆಸ್ ನಲ್ಲಿ ಮದುವೆ ಗಂಡು ಇಲ್ಲ: ಸಿಟಿ ರವಿ