ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆಯಾಗಲೇಬೇಕು, ಇದು ಬಿಜೆಪಿ ನಿಲುವು: ಆರ್ ಅಶೋಕ

ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆಯಾಗಲೇಬೇಕು, ಇದು ಬಿಜೆಪಿ ನಿಲುವು: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2024 | 7:45 PM

ಪೆನ್ ಡ್ರೈವ್ ಗಳನ್ನು ಹಂಚಿದ ದುರುಳರು ನಿರಪರಾಧಿ ಮತ್ತು ಅಮಾಯಕ ಮಹಿಳೆಯರ ಬಗ್ಗೆ ಯೋಚನೆ ಮಾಡಬೇಡವೇ? ಅವರು ಇನ್ನು ಮುಂದೆ ಸಮಾಜದಲ್ಲಿ ತಲೆಯೆತ್ತಿ ತಿರುಗುವುದು ಸಾಧ್ಯವೇ? ಗೃಹ ಸಚಿವ ಪರೆಮೇಶ್ವರ್ ಪೆನ್ ಡ್ರೈವ್ಗಳನ್ನು ಈಗ ಸೀಜ್ ಮಾಡುತ್ತಾರಂತೆ, ಈಗ ಅದರಿಂದ ಏನು ಪ್ರಯೋಜನ ಎಂದು ಅಶೋಕ ಕೇಳಿದರು.

ಶಿವಮೊಗ್ಗ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ   (R Ashoka) ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna case) ಬಿಜೆಪಿ ನಿಲುವನ್ನು (BJP stand) ಸ್ಪಷ್ಟಪಡಿಸಿದರು. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಅಶೋಕ ಹೇಳಿದರು. ಅದರೆ, ಸುಮಾರು 5,000 ಪೆನ್ ಡ್ರೈವ್ ಗಳನ್ನು ಹಂಚಲಾಗಿದೆ ಅಂತ ಹೇಳುತ್ತಿದ್ದಾರೆ, ಅವೆಲ್ಲ ತಯಾರಾಗಿದ್ದು ಎಲ್ಲಿ ಮತ್ತು ಹಂಚಿದ್ದು ಯಾರು? ಹಾಗೆಯೇ ಪ್ರಜ್ವಲ್ ನನ್ನು ವಿದೇಶಕ್ಕೆ ಹಾರಿಹೋಗಲು ಬಿಟ್ಟವರು ಯಾರು? ರಾಜ್ಯದ ಗುಪ್ತಚರ ದಳ ನಿದ್ದೆ ಮಾಡ್ತಾ ಇದೆ ಮತ್ತು ಸರ್ಕಾರ ಕತ್ತೆ ಕಾಯ್ತಾ ಇದೆಯಾ? ಅವರನ್ನು ತಪ್ಪಿಸಿಕೊಳ್ಳಲು ಬಿಟ್ಟ ಕಾಂಗ್ರೆಸ್ ಸರ್ಕಾರವನ್ನು ಸೋನಿಯ ಗಾಂಧಿ ಮತ್ತು ರಾಹುಲ್ ಛೀಮಾರಿ ಹಾಕಬೇಕು ಎಂದು ಅಶೋಕ ಹೇಳಿದರು. ಪೆನ್ ಡ್ರೈವ್ ಗಳನ್ನು ಹಂಚಿದ ದುರುಳರು ನಿರಪರಾಧಿ ಮತ್ತು ಅಮಾಯಕ ಮಹಿಳೆಯರ ಬಗ್ಗೆ ಯೋಚನೆ ಮಾಡಬೇಡವೇ? ಅವರು ಇನ್ನು ಮುಂದೆ ಸಮಾಜದಲ್ಲಿ ತಲೆಯೆತ್ತಿ ತಿರುಗುವುದು ಸಾಧ್ಯವೇ? ಗೃಹ ಸಚಿವ ಪರೆಮೇಶ್ವರ್ ಪೆನ್ ಡ್ರೈವ್ಗಳನ್ನು ಈಗ ಸೀಜ್ ಮಾಡುತ್ತಾರಂತೆ, ಈಗ ಅದರಿಂದ ಏನು ಪ್ರಯೋಜನ ಎಂದು ಅಶೋಕ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ: ಆರ್ ಅಶೋಕ ವಾಗ್ದಾಳಿ