ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ

Updated on: May 17, 2025 | 10:05 PM

ಬೆಂಗಳೂರಿನಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಜಯನಗರದಲ್ಲಿ ರಸ್ತೆಗೆ ಮರ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದಾಗಿ ಹಲವು ಸ್ಥಳಗಳಲ್ಲಿ ನೀರು ನಿಂತಿದೆ. ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು, ಮೇ 17: ಬೆಂಗಳೂರಿನಲ್ಲಿ ಮಳೆಯಾಗಿದೆ. ಶನಿವಾರ (ಮೇ.17) ಸಂಜೆ ಬೆಂಗಳೂರಿನ ಶಾಂತಿನಗರ, ರಿಚ್ಮಂಡ್​ ಸರ್ಕಲ್​, ಕಾರ್ಪೊರೇಷನ್, ಕಬ್ಬನ್​ಪಾರ್ಕ್, ಚಿನ್ನಸ್ವಾಮಿ ಮೈದಾನ, ವಿಧಾನಸೌಧ, ಕೆ.ಆರ್​.ಮಾರ್ಕೆಟ್, ಮೆಜೆಸ್ಟೆಕ್​, ರಾಜಾಜಿನಗರ, ಲಾಲ್​ಬಾಗ್​, ಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಜಯನಗರ ಈಸ್ಟ್ ಎಂಡ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ವಾಹನ ಸವಾರರು ಪರದಾಡಿದರು.