ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ

Edited By:

Updated on: Jan 09, 2026 | 6:14 PM

ಬೆಂಗಳೂರು ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರವೆಂದು ಹಲವು ವರ್ಷಗಳಿಂದ ನೆಲೆಸಿರುವ ನಿವಾಸಿಗಳು, ವಿದ್ಯಾರ್ಥಿನಿಯರು ಮತ್ತು ಗೃಹಿಣಿಯರು ಖಚಿತಪಡಿಸಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಹಗಲು ರಾತ್ರಿ ಶ್ರಮ, ಸುರಕ್ಷಾ ಆ್ಯಪ್‌ನಂತಹ ಕ್ರಮಗಳು ಈ ಸುರಕ್ಷಿತ ವಾತಾವರಣಕ್ಕೆ ಕಾರಣವಾಗಿವೆ. ದೆಹಲಿ, ಮುಂಬೈಗೆ ಹೋಲಿಸಿದರೆ ಇಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಎನ್ನುವುದು ಸಾರ್ವಜನಿಕರ ಅನಿಸಿಕೆ.

ಬೆಂಗಳೂರು, ಜನವರಿ 09: ಮಹಿಳೆಯರು ವಾಸಿಸಲು ಬೆಂಗಳೂರು ಸುರಕ್ಷಿತ ನಗರ ಎಂದು ವರದಿಯೊಂದು ಬಹಿರಂಗವಾಗಿದೆ. ಈ ಬಗ್ಗೆ ಬೆಂಗಳೂರಿನ ಕೆಲ ಮಹಿಳಾ ಮಣಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ತುಂಬಾ ಸುರಕ್ಷಿತ ನಗರ ಅನ್ನಿಸುತ್ತದೆ. ಏಕೆಂದರೆ ಬೆಂಗಳೂರು ಮಹಿಳಾ ಪೋಲಿಸರು ನಮಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಾರೆ, ಹಾಗಾಗಿ ನಾವು ಸೇಫ್ ಆಗಿದ್ದೇವೆ. ಮಹಿಳೆಯರಿಗಾಗಿ ಸುರಕ್ಷಾ ಆ್ಯಪ್ ಕೂಡ ಇದೆ. ಬೇರೆ ರಾಜ್ಯದಿಂದ ಬಂದಿರುವ ನಮ್ಮ ಸ್ನೇಹಿತೆಯರು ಬೆಂಗಳೂರು ತುಂಬಾ ಸುರಕ್ಷಿತ ನಗರ ಅಂತ ಹೇಳುತ್ತಾರೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Jan 09, 2026 06:12 PM