ಅನುಮಾನದಿಂದಲೇ ಹೋದಾಗ ಪೊಲೀಸರಿಗೆ ಸಿಕ್ತು ಕೋಟಿ ಕೋಟಿ ಹಣ: ಪಾಳುಬಿದ್ದ ಮನೆ ಹೇಗಿದೆ ನೋಡಿ

Updated on: Nov 23, 2025 | 3:20 PM

ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್​​ ಮೇಲೆ 7.11 ಲಕ್ಷ ರೂಪಾಯಿ ದರೋಡೆ ಪ್ರಕರಣದ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಕಳ್ಳತನವಾಗಿದ್ದ ಹಣ ಹೊಸಕೋಟೆಯ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇಲೆ ಪಾಳು ಬಿದ್ದ ಮನೆ ಬಾಗಿಲು ತೆರೆದು ನೋಡಿದಾಗ 5.56 ಕೋಟಿ ರೂಪಾಯಿ ಪತ್ತೆಯಾಗಿದೆ. ದರೋಡೆ ಮಾಡಿ ಬಳಿಕ ಕಾರ್ ತೆಗೆದುಕೊಂಡು ಹೊಸಕೋಟೆ ಟೋಲ್‌ಗೆ ಹೋಗದೇ ಕೆರೆ ಏರಿ ಹೋಗಿ ಪಾಳುಬಿದ್ದ ಮನೆಯೊಂದರಲ್ಲಿ ಹಣ ಬಚ್ಚಿಟ್ಟು ಗ್ಯಾಂಗ್ ಎಸ್ಕೇಪ್ ಆಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು ಸದ್ಯ ಏಳು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀರು ಬಲೆ ಬೀಸಿದ್ದಾರೆ.

ಬೆಂಗಳೂರು, (ನವೆಂಬರ್ 23): ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್​​ ಮೇಲೆ 7.11 ಲಕ್ಷ ರೂಪಾಯಿ ದರೋಡೆ ಪ್ರಕರಣದ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಇದೀಗ ಕಳ್ಳತನವಾಗಿದ್ದ ಹಣ ಹೊಸಕೋಟೆಯ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇಲೆ ಪಾಳು ಬಿದ್ದ ಮನೆ ಬಾಗಿಲು ತೆರೆದು ನೋಡಿದಾಗ 5.56 ಕೋಟಿ ರೂಪಾಯಿ ಪತ್ತೆಯಾಗಿದೆ. ದರೋಡೆ ಮಾಡಿ ಬಳಿಕ ಕಾರ್ ತೆಗೆದುಕೊಂಡು ಹೊಸಕೋಟೆ ಟೋಲ್‌ಗೆ ಹೋಗದೇ ಕೆರೆ ಏರಿ ಹೋಗಿ ಪಾಳುಬಿದ್ದ ಮನೆಯೊಂದರಲ್ಲಿ ಹಣ ಬಚ್ಚಿಟ್ಟು ಗ್ಯಾಂಗ್ ಎಸ್ಕೇಪ್ ಆಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು ಸದ್ಯ ಏಳು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀರು ಬಲೆ ಬೀಸಿದ್ದಾರೆ. ಹಾಗಾದ್ರೆ, ದರೋಡೆ ಮಾಡಿದ ಹಣ ಸಿಕ್ಕ ಪಾಳುಬಿದ್ದ ಮನೆ ಹೇಗಿದೆ ಎನ್ನುವುದನ್ನು ನೋಡಿ.