ಟೀ ಚೆನ್ನಾಗಿಲ್ಲ ಎಂದ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಅಂಗಡಿ ಸಿಬ್ಬಂದಿ
ಜಸ್ಟ್ ಟೀ ವಿಚಾರಕ್ಕೆ ನಡೆದ ಕ್ಷುಲ್ಲಕ ಜಗಳ ತಾರಕಕ್ಕೇರಿ ಟೀ ಶಾಪ್ ಶಾಪ್ ಸಿಬ್ಬಂದಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಅಂಗಡಿ ಟೀ ಚೆನ್ನಾಗಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಬಸ್ ಚಾಲಕನ ಮೇಲೆ ಶಾಪ್ ಸಿಬ್ಬಂದಿ ಪ್ಲಾಸ್ಕ್‌ನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಗಾಯಗೊಂಡ ಚಾಲಕನನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 14: ಜಸ್ಟ್ ಟೀ ಚೆನ್ನಾಗಿಲ್ಲ ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ಅಂಗಡಿ ಸಿಬ್ಬಂದಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದಂತಹ ಆಘಾತಕಾರಿ ಘಟನೆ ಶನಿವಾರ ಬೆಳಗ್ಗೆ ಮೆಜೆಸ್ಟಿಕ್‌ನಲ್ಲಿ (Majestic) ನಡೆದಿದೆ. ಈ ಅಂಗಡಿ ಟೀ ಚೆನ್ನಾಗಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದು ಬಸ್ ಚಾಲಕ ಮುಗ್ಗಪ್ಪ ಗುಲ್ಲಪ್ಪನವರ್ ಹೇಳಿದ್ದಕ್ಕೆ ಕೋಪಗೊಂಡ ಅಂಗಡಿ ಸಿಬ್ಬಂದಿ ಪ್ಲಾಸ್ಕ್‌ನಿಂದ ಹಲ್ಲೆ ನೆಡೆಸಿದ್ದಾನೆ. ಬಳಿಕ ಗಾಯಗೊಂಡ ಮುಗ್ಗಪ್ಪ ಅವರನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಟೀ ಶಾಪ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

