ಬೆಂಗಳೂರು: ಶಾಲಾ ವಾಹನ ಡ್ರೈವರ್ ಗಳ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ, 23 ಚಾಲಕರ ವಿರುದ್ಧ ಪ್ರಕರಣ ದಾಖಲು

|

Updated on: Jul 09, 2024 | 4:20 PM

ಮಕ್ಕಳನ್ನು ಹೊತ್ತ ಶಾಲಾ ವಾಹನಗಳ ಚಾಲಕರು ಮದ್ಯ ಸೇವಿಸಿ ಕೈಯಲ್ಲಿ ವ್ಹೀಲ್ ಹಿಡಿಯುವುದು ನಿಜಕ್ಕೂ ಅಕ್ಷಮ್ಯ. ಚಾಲಕರು ಮದ್ಯ ಸೇವಿಸಲು ಸ್ವತಂತ್ರರು. ಆದರೆ, ಕರ್ತವ್ಯದ ಮೇಲಿರುವಾಗ ಕುಡಿಯುವುದು ತಪ್ಪು. ಅವರ ಶೋಕಿ ಅಥವಾ ಚಟಕ್ಕಾಗಿ ಮಕ್ಕಳು ತೊಂದರೆಗೊಳಗಾಗಬಾರದು. ಪೋಷಕರಿಗೆ ಚಾಲಕ ಕುಡಿದಿರುವ ಬಗ್ಗೆ ಸಂಶಯ ಬಂದರೆ ವಿಷಯವನ್ನು ನಿರ್ದಾಕ್ಷಿಣ್ಯವಾಗಿ ಶಾಲಾ ಆಡಳಿತದ ಗಮನಕ್ಕೆ ತರಬೇಕು.

ಬೆಂಗಳೂರು: ನಗರದ ಟ್ರಾಫಿಕ್ ಪೊಲೀಸ್ ಇವತ್ತು ನಡೆಸಿದ ಕಾರ್ಯಾಚರಣೆ ಅಭಿನಂದನಾರ್ಹ. ಇಂಥ ಕಾರ್ಯಾಚರಣೆಯನ್ನು ಅವರು ಆಗಾಗ್ಗೆ ಮಾಡುತ್ತಿದ್ದರೆ ಪೋಷಕರು ನಿರುಮ್ಮಳವಾಗಿರುತ್ತಾರೆ. ಅಸಲಿಗೆ ವಿಷಯವೇನೆಂದರೆ ಮಕ್ಕಳನ್ನು ಶಾಲೆಗಳಿಗೆ ಕ್ಯಾರಿ ಮಾಡುವ ವಾಹನಗಳ ಚಾಲಕರು ಬೆಳಗಿನ ಹೊತ್ತೇ ಮದ್ಯವನ್ನು ಹೊಟ್ಟೆಗಿಳಿಸಿ ವಾಹನಗಳನ್ನೇದರೂ ಓಡಿಸುತ್ತಾದ್ದಾರೆಯೇ ಪೊಲೀಸರು ಇವತ್ತು ಕಾರ್ಯಾಚರಣೆ ನಡೆಸಿದರು. ಅವರು ತಾವಾಗೇ ಈ ನಿರ್ಧಾರ ತೆಗೆದುಕೊಂಡರೋ ಅಥವಾ ಪೋಷಕರೇನಾದರೂ ದೂರು ಸಲ್ಲಿಸಿದ್ದರೋ ಅನ್ನೋದು ಗೊತ್ತಾಗಿಲ್ಲ. ಒಟ್ಟಿನಲ್ಲಿ ಅವರು ನಗರದ ನಾನಾ ಭಾಗಗಳಲ್ಲಿ ರಸ್ತೆಗಿಳಿದು, ಶಾಲಾ ವಾಹನಗಳನ್ನು ತಡೆದು ಚಾಲಕರನ್ನು ಅಲ್ಕೋಮೀಟರ್ ನಿಂದ ತಪಾಸಣೆ ಮಾಡಿದರು. ಪೊಲೀಸ್ ಮೂಲಗಳ ಪ್ರಕಾರ ಇವತ್ತು ಒಟ್ಟು 3016 ಶಾಲಾ ವಾಹನಗಳ ಚಾಲಕರ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗಿದ್ದು, 23 ಚಾಲಕರು ಕುಡಿದು ವಾಹನ ಓಡಿಸುತ್ತಿದ್ದಿದ್ದು ಗೊತ್ತಾಗಿದೆ. ಆ ಚಾಲಕರ ವಿರುದ್ಧ ಕಲಂ 185 ಐವಿಎಂ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸುತ್ತಿದ್ದ ಚಾಲಕರು, 16 ಜನರ ವಿರುದ್ಧ ದೂರು ದಾಖಲು

Follow us on