ಬೆಂಗಳೂರು, ಫೆ.04: ಉಪ್ಪಾರಪೇಟೆ ಸಂಚಾರ ಪೊಲೀಸನೋರ್ವ(Traffic Police) ರಸ್ತೆ ಬದಿ ತರಕಾರಿ ಮಾರುವವರ ಮೇಲೆ ದರ್ಪ ತೋರಿದ್ದು, ವ್ಯಾಪಾರಸ್ಥರ ತಕ್ಕಡಿ ತೆಗೆದುಕೊಂಡು ನೆಲಕ್ಕೆ ಎಸೆದಿರುವ ಘಟನೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದಿದೆ. ಇತ್ತೀಚೇಗೆ ಬೀದಿಬದಿ ವ್ಯಾಪಾರ ಮಾಡುವದನ್ನು ತೆರವು ಮಾಡಿಸಬೇಕೆಂದು ಹೈಕೋರ್ಟ್ ಸೂಚನೆ ಕೊಟ್ಟಿತ್ತು. ಈ ಹಿನ್ನಲೆ ಇಂದು ಮಧ್ಯಾಹ್ನ ಮೂರು ಗಂಟೆಗೆ ಸಂಚಾರ ಹೆಡ್ಕಾನ್ಸ್ಟೇಬಲ್ ನಾಗರಾಜ್ ಎಂಬಾತ ರಸ್ತೆ ಬದಿ ತರಕಾರಿ ಮಾರುವವರ ತಳ್ಳುವ ಗಾಡಿ ಎತ್ತಿಸಲು ಬಂದಿದ್ದ. ಈ ವೇಳೆ ನಡುರಸ್ತೆಯಲ್ಲಿಯೇ ತಕ್ಕಡಿ ಎಸೆದು ದರ್ಪ ತೋರಿದ್ದಾನೆ. ನೆಲಕ್ಕೆ ಎಸೆದ ಪರಿಣಾಮ ತಕ್ಕಡಿ ಒಡೆದು ಹೋಗಿದ್ದು, ನಾಗರಾಜ್ ವರ್ತನೆಗೆ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ