ಶಿರಸಿಯಲ್ಲಿ ಶಿವಲಿಂಗದ ಮೇಲೆ ಬಳಪದಿಂದ ಬರೆದು ಕಿಡಿಗೇಡಿಗಳ ವಿಕೃತಿ
ಶಿರಸಿ ತಾಲೂಕಿನ ನರಬೈಲ್(Narbailu) ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಾಲಯದಲ್ಲಿ(Someshwara temple) ಶಿವಲಿಂಗದ ಮೇಲೆ ಇಂಗ್ಲಿಷ್ ಅಕ್ಷರದಿಂದ ಬರೆಯಲಾಗಿದೆ. ಎಂದಿನಂತೆ ಪುರೋಹಿತರು ಬೆಳಿಗ್ಗೆ 10 ಗಂಟೆಗೆ ಗರ್ಭಗುಡಿ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಶಿವಲಿಂಗದ ಮೇಲೆ ಜೆ.ಇ. ಎಸ್ 2024 ,2026 ಎಂದು ಬರೆಯಲಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉತ್ತರ ಕನ್ನಡ, ಫೆ.04: ಶಿವಲಿಂಗದ ಮೇಲೆ ಬಳಪದಿಂದ ಬರೆದು ಕಿಡಿಗೇಡಿಗಳ ವಿಕೃತಿ ಮೆರೆದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ನರಬೈಲ್(Narbailu) ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಾಲಯ (Someshwara temple)ದಲ್ಲಿ ನಡೆದಿದೆ. ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಇಂಗ್ಲಿಷ್ ಅಕ್ಷರದಿಂದ ಬರೆಯಲಾಗಿದೆ. ಎಂದಿನಂತೆ ಪುರೋಹಿತರು ಬೆಳಿಗ್ಗೆ 10 ಗಂಟೆಗೆ ಗರ್ಭಗುಡಿ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಶಿವಲಿಂಗದ ಮೇಲೆ ಜೆ.ಇ. ಎಸ್ 2024 ,2026 ಎಂದು ಬರೆಯಲಾಗಿದೆ. ಇದರಲ್ಲಿ 2024 ಹಾಗೂ 2026 ಎಂಬ ವರ್ಷದ ಪ್ರಸ್ತಾಪ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾರು ಈ ಕೃತ್ಯ ಎಸಗಿದ್ದಾರೆ. ಅದರಲ್ಲೂ ಲಿಂಗದ ಮೇಲೆ ಬರೆದಿರುವ ಅಕ್ಷರಗಳಿಂದ ಇನ್ನಷ್ಟು ತನಿಖೆಗೆ ಎಡೆಮಾಡಿಕೊಟ್ಟಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos