ಹುಡುಗಿಯರ ಪೂರೈಕೆ ಮಾಡ್ತಾನೆ, ನನ್ನನ್ನೇ ರಾಜಕಾರಣಿ ಜೊತೆ ಮಲಗು ಅಂತಾನೆ: ಮುಸ್ಲಿಂ ಮಹಿಳೆ ಕಣ್ಣೀರ ಮಾತು
ಬೆಂಗಳೂರಿನ ಮುಸ್ಲಿಂ ಮಹಿಳೆಯೊಬ್ಬರು ಗಂಡನಿಂದ ಅನುಭವಿಸಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಗಂಡ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದನೆಂದು ಆರೋಪಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆತ, ರಾಜಕಾರಣ ಜತೆ ಮಕಗುವಂತೆ ಬಲವಂತ ಮಾಡಿದ್ದ ಎಂದು ಬನಶಂಕರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಸಂತ್ರಸ್ತೆ ಮಾತನಾಡಿದ ವಿಡಿಯೋ ಇಲ್ಲಿದೆ.
ಬೆಂಗಳೂರು, ಜುಲೈ 1: ವೇಶ್ಯಾವಾಟಿಕೆ ದಂಧೆ, ಹುಡುಗಿಯರ ಪೂರೈಕೆ, ಹುಡುಗಿಯರ ಮಾರಾಟ ಮಾಡುತ್ತಾನೆ ಎಂದು ಗಂಡನ ವಿರುದ್ಧವೇ ಮುಸ್ಲಿಂ ಮಹಿಳೆಯೊಬ್ಬರು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ರಾಜಕಾರಣಿಯೊಬ್ಬರ ಜತೆ ಮಲಗುವಂತೆ ಪೀಡಿಸಿದ್ದು, ತನ್ನನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದೂ ಸಂತ್ರಸ್ತೆ ಕಣ್ಣೀರು ಹಾಕಿದ್ದಾರೆ.
ಇತ್ತೀಚೆಗೆ ರಾಜಕಾರಣಿಯೊಬ್ಬರ ಜತೆ ಸಹಕರಿಸುವಂತೆ ಬಲವಂತ ಮಾಡುತ್ತಿದ್ದ. ಅದಕ್ಕೆ ಒಪ್ಪದಿದ್ದಾಗ, ಫೋಟೊ ಎಲ್ಲ ಶೇರ್ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಆಕೆಯ ಪತಿ ಯೂನಸ್ ಪಾಷಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆಯ ನೋವಿನ ಮಾತಿನ ವಿಡಿಯೋ ಇಲ್ಲಿದೆ ನೋಡಿ.
ವಿವರವಾದ ಸುದ್ದಿ ಇಲ್ಲಿದೆ: ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್: ಪೊಲೀಸರ ಮೊರೆ ಹೋದ ಮಹಿಳೆ