ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಅಪರಿಚಿತ ವ್ಯಕ್ತಿ ಕಾಟಕ್ಕೆ ಬೇಸತ್ತ ವೈದ್ಯೆ
ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ವೈದ್ಯೆಯೊಬ್ಬರಿಗೆ ಸೈಕೋ ಕಾಟ ನೀಡುತ್ತಿದ್ದಾನೆ. ಕಳೆದ ಮೂರು ತಿಂಗಳಿನಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಇದರಿಂದ ಬೇಸತ್ತ ವೈದ್ಯೆ 112ಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೋರಮಂಗಲ ಪೊಲೀಸರು ಸೈಕೋಗಾಗಿ ಹುಡುಕಾಟ ನಡೆಸಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಡಿಸೆಂಬರ್ 14: ನಗರದ ವೈದ್ಯೆಯೊಬ್ಬರು ಸೈಕೋ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಮಲಗಿರುವಾಗ ಇಣುಕಿ ಹಾಕುವುದು, ಗೇಟ್ ಮುಂದೆ ಪಾಗಲ್ ಪ್ರೇಮಿ ತರ ಬಂದು ನಿಲ್ಲುವುದು. ಅಷ್ಟೇ ಅಲ್ಲದೆ ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಪ್ರತ್ಯಕ್ಷನಾಗುತ್ತಾನೆ. ಪ್ರಶ್ನೆ ಮಾಡಿದರೆ ಮಾತನಾಡುವುದಿಲ್ಲ. ದಿಟ್ಟಿಸಿ ನೋಡುತ್ತಾ ನಿಲ್ಲುತ್ತಾನಂತೆ. ಸೈಕೋ ಕಾಟದಿಂದ ಕಳೆದ ಮೂರು ತಿಂಗಳಿನಿಂದ ವೈದ್ಯೆ ಮಾನಸಿಕ ಕಿರುಕುಳ ಅನುಭವಿಸಿದ್ದಾರೆ. ಸೈಕೋ ಕಾಟ ವಿಪರೀತ ಹಿನ್ನಲೆ 112ಗೆ ದೂರು ನೀಡಿದ್ದ ವೈದ್ಯೆ, ಪೊಲೀಸರು ಬರುತ್ತಿದ್ದಂತೆ ಪರಾರಿಯಾಗಿದ್ದಾನೆ. ಸದ್ಯ ಅಪರಿಚಿತ ವ್ಯಕ್ತಿಗಾಗಿ ಶೋಧ ನಡೆದಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 14, 2025 04:37 PM
Follow Us
Latest Videos
ಕುಶಿನಗರದಲ್ಲಿ ಪ್ರವಾಹದ ಸ್ಥಳಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಪಂಚಮಸಾಲಿ ಗುರುಪೀಠದಲ್ಲಿ '10 ಕೋಟಿ ರೂ.' ಅನುದಾನ ದುರುಪಯೋಗ ಆರೋಪ
ಏನಾದ್ರೂ ಹೇಳಿದ್ರೆ ಅಳುತ್ತ ಕೂರ್ತೀಯ: ಶಾಸ್ತ್ರಿ ಮುಖವಾಡ ಬಯಲು ಮಾಡಿದ ಜಗ್ಗ
ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್!

