ಆಯುಧ ಪೂಜೆ ಸಂಭ್ರಮ: ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ವಾಹನ ಪೂಜೆ
ಬೆಂಗಳೂರಿನಲ್ಲಿ ಆಯುಧ ಪೂಜೆ ಸಂಭ್ರಮ ಮನೆಮಾಡಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ವಾಹನಗಳ ಸಾಲುಗಟ್ಟಿ ಪೂಜೆ ನಡೆಯಿತು. ಇಲ್ಲಿ ಎತ್ತರದ ಗಣಪತಿಗೆ ಅಭಿಷೇಕವೂ ಜರುಗಿತು. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಕಾರು, ಲಾರಿ, ಆಟೋ ಸೇರಿ ವಿವಿಧ ವಾಹನಗಳಿಗೆ ವಿಶೇಷ ಪೂಜೆ ನೆರವೇರಿತು. ಜನರು ತಮ್ಮ ವಾಹನಗಳನ್ನು ವಾಹನ ಲಕ್ಷ್ಮಿ ಎಂದು ಭಾವಿಸಿ ಭಕ್ತಿಯಿಂದ ಪೂಜಿಸಿದರು.
ಬೆಂಗಳೂರಿನಾದ್ಯಂತ ಆಯುಧ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ನಗರದ ಪ್ರಮುಖ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಸವನಗುಡಿಯ ಐತಿಹಾಸಿಕ ದೊಡ್ಡ ಗಣಪತಿ ದೇವಾಲಯದಲ್ಲಿ ಭಕ್ತರು ತಮ್ಮ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿರುವ ಎತ್ತರದ ಗಣೇಶ ಮೂರ್ತಿಗೆ ಅರ್ಚಕರು ಹಾಲಿನ ಅಭಿಷೇಕವನ್ನು ನೆರವೇರಿಸಲಾಯಿತು. ದೊಡ್ಡ ಪಾತ್ರೆಗಳಲ್ಲಿ ಹಾಲನ್ನು ತುಂಬಿ ಗಣೇಶನಿಗೆ ಅಭಿಷೇಕ ಮಾಡುತ್ತಿದ್ದ ದೃಶ್ಯ ಮನಸೆಳೆಯುವಂತಿತ್ತು.
ಅದೇ ರೀತಿ, ಮಲ್ಲೇಶ್ವರಂನಲ್ಲಿರುವ ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಆಯುಧ ಪೂಜೆಯ ಸಡಗರ ಮನೆ ಮಾಡಿತ್ತು. ಇಲ್ಲಿ ಕಾರು, ಲಾರಿ, ಆಟೋ, ಟಿಪ್ಪರ್, ಟ್ಯಾಂಕರ್, ದ್ವಿಚಕ್ರ ವಾಹನಗಳು ಸೇರಿದಂತೆ ನಾನಾ ರೀತಿಯ ವಾಹನಗಳು ಪೂಜೆಯಲ್ಲಿ ಪಾಲ್ಗೊಂಡವು.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
