AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್: ನಂಬಿಕೆಯ ಬ್ಯಾಂಕ್​​ ಹೀಗೆ ಮಾಡಿದ್ರೆ ಹೇಗೆ?

ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್: ನಂಬಿಕೆಯ ಬ್ಯಾಂಕ್​​ ಹೀಗೆ ಮಾಡಿದ್ರೆ ಹೇಗೆ?

Shivaprasad B
| Edited By: |

Updated on: Apr 24, 2026 | 11:05 PM

Share

ಇಂಡಿಯನ್ ಬ್ಯಾಂಕ್‌ನ ಗಿರಿನಗರ ಶಾಖೆಯಲ್ಲಿ 4 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ. ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ವಿರುದ್ಧ ಆರೋಪಿಸಲಾಗಿದ್ದು, ಗ್ರಾಹಕರು ಇಟ್ಟ ಚಿನ್ನ ಮಾಯವಾಗಿದೆ. ಬ್ಯಾಂಕ್ ಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿದ್ದರೂ, ಮೂರು ತಿಂಗಳಾದರೂ ಗ್ರಾಹಕರಿಗೆ ನ್ಯಾಯ ಸಿಕ್ಕಿಲ್ಲ. ಎಫ್‌ಐಆರ್ ದಾಖಲಾಗಿದ್ದರೂ, ವಂಚನೆಯ ಬದಲು ನಿರ್ಲಕ್ಷ್ಯದ ಆರೋಪ ಮಾಡಲಾಗಿದೆ.

ಬೆಂಗಳೂರು, ಏಪ್ರಿಲ್​ 24: ಬ್ಯಾಂಕ್ ಅಂದಮೇಲೆ ಹಣ ಮತ್ತು ಒಡವೆಗೆ ಭದ್ರತೆ ಇರುತ್ತದೆ ಎಂದು ನಂಬುವ ಜನರಿಗೆ ಬೆಂಗಳೂರಿನ ಗಿರಿನಗರದ ಈ ಘಟನೆ ಆಘಾತ ನೀಡಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬ ತನ್ನ ಬೆಟ್ಟಿಂಗ್ ಚಟಕ್ಕಾಗಿ ಗ್ರಾಹಕರ ಚಿನ್ನಕ್ಕೆ ಕನ್ನ ಹಾಕಿದ್ದು, ಸದ್ಯ ಜಾಮೀನಿನ ಮೇಲೆ ಹೊರಬಂದು ಓಡಾಡುತ್ತಿದ್ದಾನೆ. ಇತ್ತ ಸಾಲ ತೀರಿಸಿದರೂ ತಮ್ಮ ಚಿನ್ನ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಈ ಮೊದಲು ಬ್ಯಾಂಕ್ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಹಕರಿಗೆ ಭರವಸೆ ನೀಡಿತ್ತು. ಆದರೆ, ಮೂರು ತಿಂಗಳ ನಂತರವೂ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಎಫ್‌ಐಆರ್ ದಾಖಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಹಕರು ಇದೀಗ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us