ಮಹಾಶಿವರಾತ್ರಿ ಹಬ್ಬದ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು

Edited By:

Updated on: Feb 13, 2026 | 5:46 PM

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಹೂವುಗಳ ಬೆಲೆ ಶೇಕಡಾ 40-60ರಷ್ಟು ಮತ್ತು ಹಣ್ಣುಗಳ ಬೆಲೆ ಶೇಕಡಾ 30ರಷ್ಟು ಹೆಚ್ಚಳ ಕಂಡಿದೆ. ಹಬ್ಬದ ಆಚರಣೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಬಂದ ಗ್ರಾಹಕರು ದುಬಾರಿ ಬೆಲೆಯಿಂದ ಕಂಗಾಲಾಗಿದ್ದಾರೆ.

ಬೆಂಗಳೂರು, ಫೆಬ್ರವರಿ 13: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಈ ವರ್ಷ ಹೂವುಗಳ ಬೆಲೆ ಶೇಕಡಾ 40ರಿಂದ 60ರಷ್ಟು ಹೆಚ್ಚಾಗಿದ್ದು, ಕೆಲವು ಹೂವುಗಳಿಗೆ ಕಳೆದ ವಾರಕ್ಕಿಂತ ಪ್ರತಿ ಕೆ.ಜಿ.ಗೆ 100ರಿಂದ 200 ರೂಪಾಯಿ ಹೆಚ್ಚಳವಾಗಿದೆ. ಹಣ್ಣುಗಳ ಬೆಲೆಯಲ್ಲಿಯೂ ಸುಮಾರು ಶೇಕಡಾ 30ರಷ್ಟು ಏರಿಕೆ ಕಂಡುಬಂದಿದೆ.  ಬೆಲೆ ಏರಿಕೆಗೆ ಹಬ್ಬದ ಬೇಡಿಕೆ ಮತ್ತು ಚಳಿಗಾಲದಲ್ಲಿ ಹೂವಿನ ಉತ್ಪಾದನೆ ಕಡಿಮೆಯಾಗಿರುವುದು ಮುಖ್ಯ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ ಮತ್ತು ಸುಗಂಧರಾಜ ಸೇರಿದಂತೆ ಎಲ್ಲ ವಿಧದ ಹೂವುಗಳ ಬೆಲೆ ದುಬಾರಿಯಾಗಿದೆ. ಗ್ರಾಹಕರು ಈ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿದ್ದು, ಹಬ್ಬದ ಬಜೆಟ್ ಅನ್ನು ನಿರ್ವಹಿಸುವುದು ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೂ, ಹಬ್ಬ ಆಚರಣೆಗಾಗಿ ಅನಿವಾರ್ಯವಾಗಿ ಹೆಚ್ಚಿನ ಬೆಲೆ ತೆತ್ತು ಖರೀದಿಸುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
TV9 Web

TV9 Kannada

Read More