ಪೊಲೀಸರಿಗೆ ಸವಾಲು ಹಾಕುವಷ್ಟು ಧೈರ್ಯ ಪುಡಿ ರೌಡಿಗಳಿಗೆ ಎಲ್ಲಿಂದ ಬರುತ್ತದೆ! ಬಹಳ ಗಂಭೀರ ಪ್ರಶ್ನೆಯಿದು!
ವಿಡಿಯೋನಲ್ಲಿ ಪೊಲೀಸರಿಗೆ ಸವಾಲು ಹಾಕುತ್ತಿರುವ ರಾಹುಲ್ ಆಫ್ಕೋರ್ಸ್ ಮದ್ಯದ ಅಮಲಿನಲ್ಲಿದ್ದಾನೆ. ನಶೆಯಲ್ಲಿ ಏನೋ ಬಡಬಡಿಸಿದ್ದಾನೆ ಅಂದುಕೊಂಡು ಸುಮ್ಮನಾನಗಬಹುದು. ಆದರೆ, ಅವನು ಅಪರಾಧ ದಳದ ಪೊಲೀಸರ ಹೆಸರುಗಳನ್ನು ಉಲ್ಲೇಖಿಸುತ್ತಾ ಸವಾಲೊಡ್ಡುತ್ತಿದ್ದಾನೆ.
ಪುಡಿರೌಡಿಗಳ ಗತ್ತು ನೋಡಿ ಮಾರಾಯ್ರೇ. ಈ ವಿಡಿಯೋನಲ್ಲಿ ರಾಹುಲ್ (Rahul) ಹೆಸರಿನ ಒಬ್ಬ ಪುಟಗೋಸಿ ರೌಡಿ ಶೀಟರ್ (rowdy sheeter) ಯಾವುದೋ ಬಿಲದಲ್ಲಿ ಅಡಗಿ ಬೆಂಗಳೂರು ಮಹಾನಗರದ ಅಪರಾಧ ವಿಭಾಗದ ಪೊಲೀಸರಿಗೆ ಸವಾಲೆಸೆಯುತ್ತಿದ್ದಾನೆ. ಪೊಲೀಸರಿಗೆ ಅವನನ್ನು ಹಿಡಿಯಲು ಆಗುವುದಿಲ್ಲವಂತೆ, ಬೇಕರಿ ರಘುವನ್ನು (Bakery Raghu) ಕೊಂದ ಬಳಿಕ ತಾನೇ ಖುದ್ದಾಗಿ ಸರೆಂಡರ್ ಆಗ್ತಾನಂತೆ! ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ರಾಹುಲ್ ಈ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅವನ ಜೊತೆ ಮತ್ತೂ ಕೆಲವರಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸೈಕಲ್ ರವಿ ಮತ್ತು ಬೇಕರಿ ರಘು ಇಬ್ಬರಿಗೂ ಈ ರಾಹುಲ್ ಬದ್ಧವೈರಿ. ಬೆಂಗಳೂರು ನಗರದಲ್ಲಿ ಅದೆಷ್ಟೋ ರೌಡಿಗಳಿದ್ದಾರೆ ಮತ್ತು ಅವರ ಹೆಸರು ಹೇಳಿಕೊಂಡು ಜನರನ್ನು ಹೆದರಿಸಿ ಹಫ್ತಾಗಳ ವಸೂಲಿ ಮಾಡಿ ಬದುಕುವ ಪುಡಿರೌಡಿಗಳು ಸಹ ಬೇಕಾದಷ್ಟಿದ್ದಾರೆ. ಆದರೆ ವಿಷಯ ಅದಲ್ಲ. ಪೊಲೀಸರಿಗೆ ಸವಾಲೊಡ್ಡುವಷ್ಟು ಧೈರ್ಯ ಇವರಿಗೆ ಎಲ್ಲಿಂದ ಬರುತ್ತದೆ? ಇದು ನಮ್ಮೆಲ್ಲರಿಗಿಂತ ಜಾಸ್ತಿ ಖಾಕಿಧಾರಿಗಳನ್ನು ಕಾಡು ಪ್ರಶ್ನೆಯಾಗಿದೆ.
ವಿಡಿಯೋನಲ್ಲಿ ಪೊಲೀಸರಿಗೆ ಸವಾಲು ಹಾಕುತ್ತಿರುವ ರಾಹುಲ್ ಆಫ್ಕೋರ್ಸ್ ಮದ್ಯದ ಅಮಲಿನಲ್ಲಿದ್ದಾನೆ. ನಶೆಯಲ್ಲಿ ಏನೋ ಬಡಬಡಿಸಿದ್ದಾನೆ ಅಂದುಕೊಂಡು ಸುಮ್ಮನಾನಗಬಹುದು. ಆದರೆ, ಅವನು ಅಪರಾಧ ದಳದ ಪೊಲೀಸರ ಹೆಸರುಗಳನ್ನು ಉಲ್ಲೇಖಿಸುತ್ತಾ ಸವಾಲೊಡ್ಡುತ್ತಿದ್ದಾನೆ.
ನಿಮಗೆ ನೆನಪಿರಬಹುದು, ದಕ್ಷ ಮತ್ತು ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕ್ರೈಮ್ ವಿಭಾಗದ ಎಡಿಜಿಪಿ ಮತ್ತು ಬೆಂಗಳೂರಿನ ಕಮೀಷನರ್ ಆಗಿದ್ದಾಗ ನಗರದ ಎಲ್ಲಾ ರೌಡಿಗಳ ಹುಟ್ಟಡಗಿಸಿದ್ದರು. ನಗರದ ಬೇರೆ ಬೇರೆ ವಲಯದ ರೌಡಿಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಕರೆಸಿ ಪರೇಡ್ ಮಾಡಿಸುತ್ತಿದ್ದರು.
ಅಲೋಕ್ ಅವರ ಅಧಿಕಾರಾವಧಿಯ ಸಮಯದಲ್ಲಿ ಬಾಲಮುದುರಿಕೊಂಡು ಮೂಲೆ ಸೇರಿದ್ದ ರೌಡಿಗಳಿಗೆ ಈಗ ಪೊಲೀಸರಿಗೆ ಸವಾಲು ಹಾಕುವಷ್ಟು ಧೈರ್ಯ ಬಂದಿದೆ!
ಇದನ್ನೂ ಓದಿ: ಬೆಕ್ಕಿನ ನಿದ್ರಾಭಂಗಿ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು: ವಿಡಿಯೋ ವೈರಲ್