ವಿರಾಟ್ ಕೊಹ್ಲಿ ಇನ್ನೂ ಎರಡು ವರ್ಷ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯಬೇಕಿತ್ತು ಎಂದರು ಮಾಜಿ ಕ್ರಿಕೆಟರ್ ಮದನ್ ಲಾಲ್

ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾಜಿ ಅಟಗಾರ ಮತ್ತು 1983ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಮದನ್ ಲಾಲ್ ಅವರು ವಿರಾಟ್ ನಾಯಕನಾಗಿ ಮತ್ತು ಒಬ್ಬ ಆಟಗಾರನಾಗಿ ಭಾರತೀಯ ಕ್ರಿಕೆಟ್​ಗೆ ಬಹಳ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

TV9kannada Web Team

| Edited By: Arun Belly

Jan 17, 2022 | 11:28 PM

ಯಾವುದೇ ಆವೃತ್ತಿಯ ಕ್ರಿಕೆಟ್ ಅಗಿರಲಿ ವಿರಾಟ್ ಕೊಹ್ಲಿ (Virat Kohli) ಅತ್ಯಂತ ಪ್ಯಾಶೊನೇಟ್ ಆಗಿ ಆಡುತ್ತಾರೆ. ಕ್ರೀಡೆಯೊಂದಿಗೆ ಅವರು ಭಾವಾನಾತ್ಮಕವಾಗಿ ಬೆಸೆದುಕೊಂಡಿರುವುದು ಅಕ್ಷರಶಃ ಸತ್ಯ. ಭಾರತೀಯ ಕ್ರಿಕೆಟ್ಗೆ ಕೊಹ್ಲಿ ನೀಡಿರುವ ಕೊಡುಗೆ ಒಂದೆರಡು ವರದಿಗಳಲ್ಲಿ, ಟ್ವೀಟ್ಗಳಲ್ಲಿ ಹೇಳಲಾಗದು. ಹಿಂದೆ ಆಡಿರುವ ಮಹಾನ್ ಆಟಗಾರರಂಥ ಬೇರೆ ಆಟಗಾರನ್ನು ನಾವು ನೋಡಬಹುದು. ಆದರೆ, ವಿರಾಟ್ ನಂಥ ಆಟಗಾರ ಅವರು ರಿಟೈರಾದ ಬಳಿಕ ಮತ್ತೊಬ್ಬ ಸಿಗಲಾರ. ಇಂಥ ಅಪ್ರತಿಮ ಆಟಗಾರ ಮತ್ತು ಕ್ಯಾಪ್ಟನ್ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ಟೆಸ್ಟ್ ಸರಣಿ ಸೋತ ನಂತರ ನಾಯಕತ್ವ ತ್ಯಜಿಸಿದ್ದಾರೆ. ಟಿ20 ಅವೃತ್ತಿಯ (T20 format) ನಾಯಕತ್ವವನ್ನು ಅವರು ವಿಶ್ವಕಪ್ ಟೂರ್ನಿ ಮುಗಿದ ನಂತರ ಬಿಟ್ಟುಕೊಟ್ಟಿದ್ದರು ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಆವೃತ್ತಿಯ ನಾಯಕತ್ವದಿಂದ ಬಿಸಿಸಿಐ (BCCI) ಆಯ್ಕೆ ಸಮಿತಿ ಧಕ್ಷಿಣ ಆಫ್ರಿಕ ಪ್ರವಾಸಕ್ಕೆ ಮುನ್ನ ತೆಗೆದುಹಾಕಿತು. ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ವಿರಾಟ್ ತ್ಯಜಿಸಿದ್ದು ಕ್ರಿಕೆಟ್ ವಿಶ್ವಕ್ಕೆ ಆಘಾತವನ್ನುಂಟು ಮಾಡಿದೆ. ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾಜಿ ಅಟಗಾರ ಮತ್ತು 1983ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಮದನ್ ಲಾಲ್ ಅವರು ವಿರಾಟ್ ನಾಯಕನಾಗಿ ಮತ್ತು ಒಬ್ಬ ಆಟಗಾರನಾಗಿ ಭಾರತೀಯ ಕ್ರಿಕೆಟ್​ಗೆ ಬಹಳ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ವಿರಾಟ್ ನಾಯಕತ್ವ ತೊರೆದಿದ್ದು ತನಗೆ ನಿರಾಶೆ ಮತ್ತು ಆಘಾತ ಎರಡನ್ನೂ ಉಂಟುಮಾಡಿದೆ ಎಂದ ಮದನ್ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಇಡೀ ವಿಶ್ವವೇ ಗೌರವಿಸುವಂತೆ ಮಾಡಿದ್ದು ವಿರಾಟ್. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವದ ನಂಬರ ವನ್ ತಂಡ ಎನಿಸಿಕೊಂಡಿತು. ಇಂದು ಟೀಮ್ ಇಂಡಿಯಾದ ವೇಗದ ದಾಳಿಯನ್ನು ವಿಶ್ವದ ಅಗ್ರಮಾನ್ಯ ಪೇಸ್ ಬ್ಯಾಟರಿ ಎಂದು ಕರೆಸಿಕೊಳ್ಳುವಂತೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಟೆಸ್ಟ್ ಕ್ರಿಕೆಟ್​ನಲ್ಲಿ ತಂಡ ಮಾಡುವ ಸಾಧನೆ ಒಡಿಐ ಮತ್ತು ಟಿ20 ಆವೃತ್ತಿಗಳಲ್ಲಿ ಪ್ರತಿಧ್ವನಿಸುತ್ತದೆ. ನಾಯಕತ್ವ ವಹಿಸಿಕೊಂಡ ನಂತರ ವಿರಾಟ್ ಟೀಮಿನ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ಇಲ್ಲವಾಗಿಸಿದರು ಮತ್ತು ತಂಡವನ್ನು ಒಂದು ಸಶಕ್ತ ಯುನಿಟ್ ಆಗಿ ಪರಿವರ್ತಿಸಿದರು ಎಂದು ಮದನ್ ಹೇಳಿದರು.

ವಿರಾಟ್ ಎರಡು ವರ್ಷಗಳಿಂದ ಶತಕ ಬಾರಿಸಿಲ್ಲ ಎಂದು ಜನ ದೂರುತ್ತಾರೆ. ಅದರೇನಂತೆ, ಅವರು ಟೀಮಿಗೆ ನೀಡುತ್ತಿರುವ ಕಾಂಟ್ರಿಬ್ಯೂಷನ್ ಗಮನಿಸಬೇಕು. ಶತಕ ಬಾರಿಸಿದರೆ ಮಾತ್ರ ಕಾಂಟ್ರಿಬ್ಯೂಷನ್ ಅನಿಸಿಕೊಳ್ಳುವುದಿಲ್ಲ. ಒಬ್ಬ ಬ್ಯಾಟ್ಸ್ಮನ್ ಪ್ರತಿ ಬಾರಿ ಕ್ರೀಸಿಗೆ ಹೋದಾಗ ಶತಕ ಬಾರಿಸುವುದು ಸಾಧ್ಯವಿಲ್ಲ. ವಿರಾಟ್ ಒಬ್ಬ ಪ್ಯಾಶೊನೇಟ್ ಕ್ರಿಕೆಟರ್. ಭಾರತೀಯರಲ್ಲಿ ಎಲ್ಲಾ ಆವೃತಿಗಳಿಗೂ ಚಾಂಪಿಯನ್ ಗಳಾಗುವ ಕ್ಷಮತೆ, ಸಾಮರ್ಥ್ಯವಿದೆಯೆಂದು ತೋರಿದ್ದು ವಿರಾಟ್ ಎಂದ ಮಾಜಿ ವೇಗದ ಬೌಲರ್, ವೈಯಕ್ತಿಕ ದೃಷ್ಟಿಯಿಂದ ಹೇಳುವುದಾದರೆ ಅವರು ಇನ್ನೂ ಕನಿಷ್ಟ ಎರಡು ವರ್ಷಗಳ ಕಾಲ ಟೀಮಿನ ನಾಯಕರಾಗಿರಬೇಕಿತ್ತು ಅಂತ ಹೇಳಿದರು.

ಇದನ್ನೂ ಓದಿ:   Virat Kohli: ಕೊಹ್ಲಿ ನಾಯಕತ್ವದಡಿಯಲ್ಲಿ ಏಕದಿನ, ಟಿ20, ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದವರು ಯಾರೆಲ್ಲ ಗೊತ್ತೇ?

Follow us on

Click on your DTH Provider to Add TV9 Kannada