ಡಿ-ಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಿಗ್​ಬಾಸ್ ಖ್ಯಾತಿಯ ಭೂಮಿ ಶೆಟ್ಟಿ; ಚಿತ್ರ, ಪಾತ್ರದ ಕುರಿತು ಕುತೂಹಲಕರ ಮಾಹಿತಿ ಇಲ್ಲಿದೆ

Inamdar | Bhumi Shetty: ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ‘ಇನಾಮ್ದಾರ್’ ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರ ಹಾಗೂ ಪಾತ್ರದ ಕುರಿತು ಅವರು ಮಾತನಾಡಿದ್ದಾರೆ.

TV9kannada Web Team

| Edited By: shivaprasad.hs

Jan 18, 2022 | 10:00 AM

ಬಿಗ್​ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಡಿ-ಗ್ಲಾಮ್ ರೋಲ್​ ನಿರ್ವಹಿಸಲು ಸಿದ್ಧರಾಗಿದ್ದಾರೆ. ‘ಇನಾಮ್ದಾರ್’ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಭೂಮಿ ತಮ್ಮ ಪಾತ್ರದ ಕುರಿತು ವಿವರಿಸಿದ್ದಾರೆ. ಎಲ್ಲಾ ಕಲಾವಿದರು ಭಿನ್ನ ಪಾತ್ರ ನಿರ್ವಹಿಸಲು ಬಯಸುತ್ತಿರುತ್ತಾರೆ, ನನಗೆ ಅಂತಹ ಪಾತ್ರ ಸಿಕ್ಕಿದೆ. ಬುಡಕಟ್ಟು ಜನಾಂಗದ ಪಾತ್ರ ನಿರ್ವಹಿಸುತ್ತಿದ್ದು, ಅದು ಚಾಲೆಂಜಿಂಗ್ ಆಗಿದೆ. ಇಂತಹ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದಗಳು. ಬಹಳ ಖುಷಿಯಿಂದ ಪಾತ್ರ ನಿರ್ವಹಣೆ ಮಾಡಲು ಕಾಯುತ್ತಿದ್ದೇನೆ ಎಂದಿದ್ದಾರೆ.

ಟೈಟಲ್​ನಲ್ಲಿ ‘ಕಪ್ಪು ಸುಂದರಿಯ ಸುತ್ತ’ ಎಂದು ಅಡಿಬರಹವಿರುವ ಕುರಿತು ಮಾತನಾಡಿರುವ ಭೂಮಿ ಶೆಟ್ಟಿ, ಇಡೀ ಚಿತ್ರ ಆ ಪಾತ್ರದ ಕುರಿತು ಸುತ್ತುತ್ತದೆ. ಕತೆ ಎಲ್ಲಿಂದಲೋ ಪ್ರಾರಂಭವಾಗಿ ಅವಳ ಬಳಿ ಅಂತ್ಯವಾಗುತ್ತದೆ. ಆಕೆಯೇ ಮುಖ್ಯ ಭೂಮಿಕೆಯಲ್ಲಿರುತ್ತಾಳೆ’’ ಎಂದಿದ್ದಾರೆ.

ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಯೋಜನೆ ಚಿತ್ರತಂಡಕ್ಕಿದೆ. ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ರಂಜನ್ ಛತ್ರಪತಿ, ಎಸ್ತರ್ ನರೋನ, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಸಲಿದ್ದಾರೆ.

‘ಇನಾಮ್ದಾರ್’ ಪ್ರೋಮೋ ಇಲ್ಲಿದೆ:

ಇದನ್ನೂ ಓದಿ:

ಬೋಲ್ಡ್ ಸೀನ್​ಗೆ ಒಪ್ಪಬೇಕು ಎಂಬ ಕಂಡೀಷನ್ ಹಾಕಿ‌ ‘ಸೇಕ್ರೆಡ್ ಗೇಮ್ಸ್ 3’ರ ಮಹಿಳಾ ಪಾತ್ರಗಳಿಗೆ ನಕಲಿ ಜಾಹಿರಾತು!; ನಿರ್ದೇಶಕ ಹೇಳಿದ್ದೇನು?

Nagarjuna: ಇಷ್ಟೆಲ್ಲಾ ಸಾಧನೆ ಮಾಡಿರೋ ನಾಗಾರ್ಜುನರನ್ನ ಬೇರೆಡೆ ಹೇಗೆ ಗುರುತಿಸುತ್ತಾರೆ? ಅಚ್ಚರಿಯ ವಿಚಾರ ಹಂಚಿಕೊಂಡ ನಟ

Follow us on

Click on your DTH Provider to Add TV9 Kannada