AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ‘ಸಬ್​ಮರೀನ್ ರಸ್ತೆ’! ರಸ್ತೆ ಗುಂಡಿಯಲ್ಲಿ ಸಿಲುಕಿದ ಬೈಕ್, ವಾಹನಗಳು: ವಿಡಿಯೋ ವೈರಲ್

ಬೆಂಗಳೂರಿನಲ್ಲಿ ‘ಸಬ್​ಮರೀನ್ ರಸ್ತೆ’! ರಸ್ತೆ ಗುಂಡಿಯಲ್ಲಿ ಸಿಲುಕಿದ ಬೈಕ್, ವಾಹನಗಳು: ವಿಡಿಯೋ ವೈರಲ್

ಗಣಪತಿ ಶರ್ಮಾ
|

Updated on: Sep 22, 2025 | 9:07 AM

Share

ಬೆಂಗಳೂರಿನ ರಸ್ತೆ ಗುಂಡಿಗಳೀಗ ದೇಶ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ ನಗರದ ಅತ್ಯಂತ ಜನನಿಬಿಡ ಕಾರಿಡಾರ್‌ಗಳಲ್ಲಿ ಒಂದಾಗಿರುವ ಮಾರತಹಳ್ಳಿ-ಕಾಡುಬೀಸನಹಳ್ಳಿ ರಸ್ತೆ ಗುಂಡಿಯಲ್ಲಿ ರ್ಯಾಪಿಡೋ ಬೈಕ್ ಒಂದು ಸಿಲುಕಿ ಅದರಲ್ಲಿದ್ದ ಯುವತಿ ಪ್ರಯಾಣಿಸಲಾಗದೆ ಪರದಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 22: ಸಬ್​ಮರೀನ್ ಅಥವಾ ಜಲಾಂತರ್ಗಾಮಿಗಳು ಸಮುದ್ರದಲ್ಲಿ, ನೀರಿನಾಳದಲ್ಲಿ ಸಂಚರಿಸುತ್ತವೆ ಎಂಬುದನ್ನು ಕೇಳಿದ್ದೇವೆ. ಆದರೆ, ರಸ್ತೆಯಲ್ಲಿಯೂ ಅದು ಸಂಚರಿಸಬಲ್ಲುದೇ!? ಬೆಂಗಳೂರಿನ ರಸ್ತೆಯಲ್ಲಿ ಸಾಗುತ್ತದಂತೆ! ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಯೂಟ್ಯೂಬರ್ ಒಬ್ಬರು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅದೇ ವಿಡಿಯೋವನ್ನು ಕರ್ನಾಟಕ ಪೋರ್ಟ್​​ಫೋಲಿಯೋ ಎಕ್ಸ್​​​ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದ್ದು, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಗಮನ ಸೆಳೆಯಲಾಗಿದೆ.

ಹಲವಾರು ವಾಹನಗಳು ರಸ್ತೆ ಹೊಂಡದ ಕೆಸರು ನೀರಿನಲ್ಲಿ ಸಿಲುಕಿಕೊಂಡಿದ್ದು, ರ್ಯಾಪಿಡೋ ಚಾಲಕ ಮತ್ತು ಆತನ ಜತೆಗಿದ್ದ ಮಹಿಳಾ ಪ್ರಯಾಣಿಕರೊಬ್ಬರು ರಸ್ತೆಬದಿಯಲ್ಲಿ ಸಿಲುಕಿಕೊಂಡಿದ್ದರು. ಆ ಮಹಿಳೆ ಪ್ರಯಾಣ ರದ್ದುಗೊಳಿಸುವಂತೆ ಕೇಳಿಕೊಂಡಳು, ಉಳಿದ ದಾರಿ ನಡೆದುಕೊಂಡು ಹೋಗುವುದಾಗಿ ಹೇಳಿದಳು. ಆಗ ಯೂಟ್ಯೂಬರ್ ಲಕ್ಷ್ಮಣ್ ಗೋಸ್ವಾಮಿ ಅವರ ನೆರವಿಗೆ ಧಾವಿಸಿ, ಸಹಾಯ ಮಾಡುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಆಗ ಅವರು, ‘ಇದೇನು ಸಬ್​​ಮರೀನ್ ರಸ್ತೆಯೇ’ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More