BESCOM Electricity Price Hike: ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಇಂದಿನಿಂದ (ಮೇ 1) ವಿದ್ಯುತ್ ದರ ಏರಿಕೆಯಾಗಿದೆ. ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ. 2000 ಕೋಟಿ ರೂ. ನಷ್ಟ ಸರಿದೂಗಿಸಲು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು (KERC) ದರ ಏರಿಕೆಗೆ ಅನುಮೋದನೆ ನೀಡಿದೆ.
ಬೆಂಗಳೂರು, ಮೇ 1: ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರಿಗೆ ಇಂದಿನಿಂದ (ಮೇ 1) ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರಿಗೆ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಲಿದೆ. ಈಗಾಗಲೇ ಗ್ಯಾಸ್ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರಿಗೆ ಈ ವಿದ್ಯುತ್ ದರ ಏರಿಕೆ ಮತ್ತೊಂದು ಹೊಡೆತವಾಗಿದೆ. ಬೆಸ್ಕಾಂ ಸಂಸ್ಥೆಯು ಸುಮಾರು 2000 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ (KERC) ಅಸ್ತು ಎಂದಿದೆ. ಇಂದಿನಿಂದ ಅನ್ವಯವಾಗುವಂತೆ ಮೀಟರ್ ರೀಡಿಂಗ್‌ಗೆ ಹೊಸ ದರಗಳು ಜಾರಿಗೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
