AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಕಾಲರ್ ಹಿಡಿದು ಎಳೆದೊಯ್ದ ಪಿಎಸ್​​ಐ

ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಕಾಲರ್ ಹಿಡಿದು ಎಳೆದೊಯ್ದ ಪಿಎಸ್​​ಐ

ಶಿವಕುಮಾರ್ ಪತ್ತಾರ್
| Edited By: |

Updated on: Jun 20, 2026 | 9:35 PM

Share

ಕಾವಲು ಕಾಯಬೇಕಾದ ಕಾನೂನು ರಕ್ಷಕನೇ ಭಕ್ಷಕನಾದ್ರೆ ಹೆಂಗೆ,ಅದ್ರಲ್ಲೂ ದೇಶಕ್ಕೆ ಅನ್ನ ಹಾಕೋ ಅನ್ನದಾತರ ಮೇಲೆ ಖಾಕಿ ದರ್ಪ ತೋರಿಸಿದ್ರೆ ಸಹಿಸೋಕೆ ಸಾಧ್ಯನಾ,ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಇಂತದ್ದೇ ಒಂದು ಅಮಾನವೀಯ ಘಟನೆ ನಡೆದಿದೆ. ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಕೆ ಪರಿಹಾರದ ವಿಚಾರದಲ್ಲಿ ನ್ಯಾಯ ಕೇಳಲು ಹೋದ ರೈತರ ಶರ್ಟ್ ಹಿಡಿದು, ಧರಧರನೆ ಎಳೆದೊಯ್ದು ಪಿಎಸ್‌ಐ ಒಬ್ಬರು ತಮ್ಮ ದರ್ಪ ಮೆರೆದಿದ್ದಾರೆ. ಹೌದು...ಬೇವೂರ ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ಎಂಬುವವರೇ ರೈತರ ಮೇಲೆ ತಮ್ಮ ಅಧಿಕಾರದ ದರ್ಪ ಪ್ರದರ್ಶಿಸಿದ್ದಾರೆ.

ಕೊಪ್ಪಳ, (ಜೂನ್ 20): ಕಾವಲು ಕಾಯಬೇಕಾದ ಕಾನೂನು ರಕ್ಷಕನೇ ಭಕ್ಷಕನಾದ್ರೆ ಹೆಂಗೆ,ಅದ್ರಲ್ಲೂ ದೇಶಕ್ಕೆ ಅನ್ನ ಹಾಕೋ ಅನ್ನದಾತರ ಮೇಲೆ ಖಾಕಿ ದರ್ಪ ತೋರಿಸಿದ್ರೆ ಸಹಿಸೋಕೆ ಸಾಧ್ಯನಾ,ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಇಂತದ್ದೇ ಒಂದು ಅಮಾನವೀಯ ಘಟನೆ ನಡೆದಿದೆ. ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಕೆ ಪರಿಹಾರದ ವಿಚಾರದಲ್ಲಿ ನ್ಯಾಯ ಕೇಳಲು ಹೋದ ರೈತರ ಶರ್ಟ್ ಹಿಡಿದು, ಧರಧರನೆ ಎಳೆದೊಯ್ದು ಪಿಎಸ್‌ಐ ಒಬ್ಬರು ತಮ್ಮ ದರ್ಪ ಮೆರೆದಿದ್ದಾರೆ. ಹೌದು…ಬೇವೂರ ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ಎಂಬುವವರೇ ರೈತರ ಮೇಲೆ ತಮ್ಮ ಅಧಿಕಾರದ ದರ್ಪ ಪ್ರದರ್ಶಿಸಿದ್ದಾರೆ.

ಅಷ್ಟಕ್ಕೂ ಈ ಗಲಾಟೆಗೆ ಕಾರಣವಾಗಿದ್ದು ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಕೆಯ ಪರಿಹಾರದ ವಿಚಾರ. ಗುತ್ತೂರ ಗ್ರಾಮದ ರೈತರಿಗೆ ಸೇರಿದ ಸುಮಾರು 10 ಎಕರೆ ಜಮೀನಿನಲ್ಲಿ ಬರೋಬ್ಬರಿ ನಾಲ್ಕು ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಜಮೀನಿನ ಮೌಲ್ಯ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಾದ ಪ್ರಕಾಶ್, ಶ್ರೀಕಾಂತ್ ಹಾಗೂ ವಿಜಯರೆಡ್ಡಿ, ನಾಲ್ಕು ಕಂಬಗಳಿಗೆ ಒಟ್ಟು 1 ಕೋಟಿ 20 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಕಂಬ ಅಳವಡಿಸುವ ಸಿಬ್ಬಂದಿ ಮಾತ್ರ ಕೇವಲ 40 ಲಕ್ಷ ರೂಪಾಯಿ ನೀಡುವುದಾಗಿ ಪಟ್ಟು ಹಿಡಿದಿದ್ದರು. ಇದಕ್ಕೆ ರೈತರು ಒಪ್ಪದಿದ್ದಾಗ ನಿನ್ನೆ ಜಮೀನಿನಲ್ಲಿ ಭಾರಿ ಗಲಾಟೆ ನಡೆದಿದೆ.ಆಗ ಪಿಎಸ್‌ಐ ಗುರುರಾಜ್ ರೈತರನ್ನು ಎಳೆದೊಯ್ದು,ರಾತ್ರಿ ಬಿಟ್ಟು ಕಳಸಿದ್ದಾರೆ.

Follow Us