ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು; ಪ್ರವಾಸಿಗರ ಕ್ಯಾಮೆರಾದಲ್ಲಿ ದೃಶ್ಯ ಸೆರೆ

Edited By:

Updated on: Jun 30, 2026 | 11:11 AM

ತಾಲೂಕಿನ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯವು ಇತ್ತೀಚೆಗೆ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ಇಲ್ಲಿ ಅಪರೂಪದ ಚಿರತೆಗಳ ದರ್ಶನವಾಗಿದ್ದು, ಪ್ರವಾಸಿಗರು ಅದ್ಭುತ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಒಂದೇ ಮರದ ಮೇಲೆ ಕುಳಿತಿದ್ದ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಬೇಟೆಗೆ ಹೊಂಚು ಹಾಕಿ ಕುಳಿತುಕೊಂಡಿದ್ದ ಚಿರತೆಗಳ ದೃಶ್ಯಗಳು ವನ್ಯಜೀವಿ ಛಾಯಾಗ್ರಾಹಕರ ಮತ್ತು ಪ್ರವಾಸಿಗರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ . ಭದ್ರಾ ಅಭಯಾರಣ್ಯವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದ್ದು, ಇಂತಹ ವಿಸ್ಮಯಕಾರಿ ಕ್ಷಣಗಳು ಇಲ್ಲಿ ಸಾಮಾನ್ಯ. ಅಲ್ಲದೆ ಚಿರತೆಗಳು ಮರವನ್ನೇರಿ ವಿಶ್ರಮಿಸುವುದೂ ಕೂಡ ಅವುಗಳ ಗುಣಗಳಲ್ಲಿ ಒಂದು. ಚಿರತೆಗಳು ಮಾತ್ರವಲ್ಲ, ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಈ ರೀತಿಯ ನಡವಳಿಕೆ ನೈಸರ್ಗಿಕವಾಗಿ ಬಂದಿರುತ್ತದೆ.

ಚಿಕ್ಕಮಗಳೂರು, ಜೂನ್ 30: ತಾಲೂಕಿನ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯವು ಇತ್ತೀಚೆಗೆ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ಇಲ್ಲಿ ಅಪರೂಪದ ಚಿರತೆಗಳ ದರ್ಶನವಾಗಿದ್ದು, ಪ್ರವಾಸಿಗರು ಅದ್ಭುತ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಒಂದೇ ಮರದ ಮೇಲೆ ಕುಳಿತಿದ್ದ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಬೇಟೆಗೆ ಹೊಂಚು ಹಾಕಿ ಕುಳಿತುಕೊಂಡಿದ್ದ ಚಿರತೆಗಳ ದೃಶ್ಯಗಳು ವನ್ಯಜೀವಿ ಛಾಯಾಗ್ರಾಹಕರ ಮತ್ತು ಪ್ರವಾಸಿಗರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ . ಭದ್ರಾ ಅಭಯಾರಣ್ಯವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದ್ದು, ಇಂತಹ ವಿಸ್ಮಯಕಾರಿ ಕ್ಷಣಗಳು ಇಲ್ಲಿ ಸಾಮಾನ್ಯ. ಅಲ್ಲದೆ ಚಿರತೆಗಳು ಮರವನ್ನೇರಿ ವಿಶ್ರಮಿಸುವುದೂ ಕೂಡ ಅವುಗಳ ಗುಣಗಳಲ್ಲಿ ಒಂದು. ಚಿರತೆಗಳು ಮಾತ್ರವಲ್ಲ, ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಈ ರೀತಿಯ ನಡವಳಿಕೆ ನೈಸರ್ಗಿಕವಾಗಿ ಬಂದಿರುತ್ತದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More