ಹುಸಿಯಾದ ನಿರೀಕ್ಷೆ; ಅರಿಶಿನಗುಂಡಿ ಜಲಪಾತದ ಪ್ರಪಾತಕ್ಕೆ ಬಿದ್ದು ಕಾಲವಶವಾದ ಶರತ್ ಕುಮಾರ್ ಕುಟುಂಬದ ದುಃಖಕ್ಕೆ ಎಣೆಯಿಲ್ಲ

| Updated By: Digi Tech Desk

Updated on: Jul 31, 2023 | 12:12 PM

ಕುಟುಂಬದ ಯುವಕನೊಬ್ಬ ಮನೆಯ ಜವಾಬ್ದಾರಿ ಹೊತ್ತುಕೊಳ್ಳುವ ಹಂತಕ್ಕೆ ಬಂದಾಗ ಅಕಾಲ ಮರಣಕ್ಕೆ ತುತ್ತಾದರೆ, ಆ ಮನೆಯ ಸದಸ್ಯರು ಅನುಭವಿಸುವ ನೋವು, ಯಾತನೆ-ಬಾಧೆ, ಸಂಕಟ ಅಷ್ಟಿಷ್ಟಲ್ಲ.

ಶಿವಮೊಗ್ಗ: ಪೇಪರ್ ಟೌನ್ ಭದ್ರಾವತಿಯ (Paper Town Bhadravathi) ಯುವಕ ಶರತ್ ಕುಮಾರ್ (Sharat Kumar) ಕುಟುಂಬದ ನಿರೀಕ್ಷೆ ಹುಸಿಯಾಗಿದೆ. ಅವನು ಜೀವಂತ ಸಿಕ್ಕಾನು, ಸಿಗಲಿ ಅಂತ ಪೂರ್ತಿ ಒಂದು ಅವಧಿವರೆಗೆ ಕುಟುಂಬವು ತಾನು ನಂಬಿದ ದೇವರಿಗೆ ಮೊರೆಯೊಡುತಿತ್ತು. ಅದರೆ ರವಿವಾರ ಸಿಕ್ಕಿದ್ದು ಶರತ್ ನ ಮೃತದೇಹ. ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ರವಿವಾರವೇ ಶರತ್ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು. ನಿನ್ನೆ ರಾತ್ರಿ ಶರತ್ ನ ಫಾರ್ಥೀವ ಶರೀರ ಭದ್ರಾವತಿ ತಾಲ್ಲೂಕಿನ ಕೆಹೆಚ್ ನಗರಕ್ಕೆ ತಂದಾಗ ಕುಟುಂಬದ ಸದಸ್ಯರು, ಆಪ್ತರು ಮತ್ತು ಸ್ನೇಹಿತರ ದುಃಖದ ಕಟ್ಟೆಯೊಡೆದಿತ್ತು. ಕುಟುಂಬದ ಯುವಕನೊಬ್ಬ ಮನೆಯ ಜವಾಬ್ದಾರಿ ಹೊತ್ತುಕೊಳ್ಳುವ ಹಂತಕ್ಕೆ ಬಂದಾಗ ಅಕಾಲ ಮರಣಕ್ಕೆ ತುತ್ತಾದರೆ, ಆ ಮನೆಯ ಸದಸ್ಯರು ಅನುಭವಿಸುವ ನೋವು, ಯಾತನೆ-ಬಾಧೆ, ಸಂಕಟ ಪದಗಳಲ್ಲಿ ಹೇಳುವುದು ಸಾಧ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 31, 2023 12:06 PM