ಪ್ರಮುಖ ಆರೋಪಿ ಪಿಂಟ್ಯಾ ಮೊದಲು ಬಾಗಪ್ಪನ ಬಳಿ ಡ್ರೈವರ್ ಆಗಿ ಕೆಲಸ ಮಾಡಿದ್ದ: ಲಕ್ಷ್ಮಣ ನಿಂಬರ್ಗಿ, ವಿಜಯಪುರ ಎಸ್ಪಿ
ಬಾಗಪ್ಪನಿಗೆ ತಾನು ಮನೆಗೆ ಬಂದ ಬಳಿಕ ಲೈಟ್ ಆರಿಸಿ ಬಿಡುವ ವಾಡಿಕೆ ಇತ್ತಂತೆ, ತಾನು ಮನೆಯಲ್ಲಿರುವ ವಿಷಯ ವೈರಿಗಳಿಗೆ ಗೊತ್ತಾಗಬಾರದೆನ್ನುವ ಕಾರಣಕ್ಕೆ ಅವನು ಹಾಗೆ ಮಾಡುತ್ತಿದ್ದ. ಪಿಂಟ್ಯಾ ಮತ್ತು ಅವನ ಸಹಚರರು ಇದಕ್ಕೆ ಮೊದಲು ಸಹ ಬಾಗಪ್ಪ ಮೇಲೆ ಹಲ್ಲೆ ನಡೆಸಿ ಕೊಂದು ಬಿಡುವ ಸಂಚು ಮಾಡಿದ್ದರು, ಆದರೆ ಅದು ಕೈಗೂಡಿರಲಿಲ್ಲ ಎಂದು ಎಸ್ ಪಿ ಲಕ್ಷ್ಮಣ ನಿಂಬರ್ಗಿ ಹೇಳುತ್ತಾರೆ.
ವಿಜಯಪುರ: ಬಾಗಪ್ಪ ಹರಿಜನ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಪಿಂಟ್ಯಾ ಅಲಿಯಾಸ್ ಪ್ರಕಾಶ್ ಮತ್ತು ಅವನ ಮೂವರು ಸಹಚರರು ಬಾಗಪ್ಪನ ಹತ್ಯೆಯ ನಂತರ ಕಾಡಲ್ಲೇ ಓಡಾಡಿಕೊಂಡಿದ್ದರು ಮತ್ತು ಜಮಖಂಡಿ ಕಡೆ ಹೊರಡುವ ಸಿದ್ಧತೆಯಲ್ಲಿದ್ದಾಗ ಒಂದು ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿ ಅವರನ್ನು ಇಟಗಿ ಕ್ರಾಸ್ ಬಳಿ ಬಂಧಿಸಿದರು ಎಂದು ವಿಜಯಪುರದ ಎಸ್ ಪಿ ಲಕ್ಷ್ಮಣ ನಿಂಬರ್ಗಿ ಹೇಳಿದರು. ನಮ್ಮ ವರದಿರಾನೊಂದಿಗೆ ಮಾತಾಡಿರುವ ಅವರು, ಪಿಂಟ್ಯಾ ಮತ್ತು ಬಾಗಪ್ಪ ಪರಸ್ಪರ ಅಪರಿಚರೇನಲ್ಲ, ಬಾಗಪ್ಪನ ಬಳಿ ಪಿಂಟ್ಯಾ ಕಾರು ಚಾಲಕನಾಗಿ ಕೆಲಸ ಮಾಡಿದ್ದಾನೆ. ಅರೋಪಿಯು ಬಾಗಪ್ಪನ ಚಲನವಲನಗಳ ಮೇಲೆ ಸದಾ ಕಣ್ಣಿಟ್ಟಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಗಪ್ಪ ಹರಿಜನ್ನಿಂದ ತನ್ನ ಜೀವಕ್ಕೆ ಅಪಾಯವಿದೆ ಅನ್ನೋದನ್ನು ಪಿಂಟ್ಯಾ ಅರಿತಿದ್ದ: ಲಕ್ಷ್ಮಣ ನಿಂಬರಗಿ, ಎಸ್ಪಿ