ಎರಡನೇ ಹೆಂಡತಿ ಅಪಘಾತವೊಂದಕ್ಕೆ ಬಲಿಯಾದಾಗ ಬಾಗಪ್ಪ ಚಿಕ್ಕಮಗುವಿನಂತೆ ಅತ್ತಿದ್ದ: ಟಿಎಸ್ ಮಲಗೊಂಡ, ಪತ್ರಕರ್ತ
ಮೊದಲ ಹೆಂಡತಿ ಅನಾರೋಗ್ಯದಿಂದ ಮರಣಕ್ಕೀಡಾದ ಬಳಿಕ ಅವರಿಂದ ಪಡೆದಿದ್ದ ಎರಡು ಹೆಣ್ಣುಮಕ್ಕಳ ಮದುವೆಯನ್ನು ಬಾಗಪ್ಪ ಮಾಡಿದ್ದ. ಕೋರ್ಟ್ ಹೋಗಿ ಬಂದು ಮಾಡುವಾಗ ಅವನಿಗೆ ಒಬ್ಬ ವಕೀಲೆಯ ಪರಿಚಯವಾಗಿ ಅವರೊಂದಿಗೆ ಮದುವೆಯೂ ಅಗಿತ್ತು, ಅವರನ್ನು ವರಿಸಿದ ಮೇಲೆ ಎಲ್ಲ ದುಷ್ಕೃತ್ಯಗಳಿಗೆ ತಿಲಾಂಜಲಿಯನ್ನಿತ್ತು ಕಂಟ್ರ್ಯಾಕ್ಟರ್ ಅಂತ ಕರೆಸಿಕೊಳ್ಳತೊಡಗಿದ್ದ. ಎಪಿಪಿಯಾಗಿದ್ದ ಎರಡನೇ ಪತ್ನಿ ಅಪಘಾತವೊಂದರಲ್ಲಿ ತೀರಿಕೊಂಡಾಗ ಬಾಗಪ್ಪ ಚಿಕ್ಕಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ಎಂದು ಮಲಗೊಂಡ ಹೇಳುತ್ತಾರೆ.
ವಿಜಯಪುರ: ಮೊನ್ನೆ ಭೀಕರವಾಗಿ ಬದುಕಿನ ಅಂತ್ಯ ಕಂಡ ಬಾಗಪ್ಪ ಹರಿಜನ್ ಎಲ್ಲ ದುಷ್ಕತ್ಯಗಳನ್ನು ಬಿಟ್ಟು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಎಂದು ವಿಜಯಪುರದ ಹಿರಿಯ ಪತ್ರಕರ್ತ ಟಿಎಸ್ ಮಲಗೊಂಡ ಹೇಳುತ್ತಾರೆ. ನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು ಬಾಗಪ್ಪ ಇತ್ತೀಚಿಗೆ ಅಧ್ಯಾತ್ಮಿಕತೆ ಕಡೆ ಹೆಚ್ಚು ಒಲವು ತೋರತೊಡಗಿದ್ದ, ಅಪ್ಪಟ ಬೆಳ್ಳಿಯಲ್ಲಿ ಲಕ್ಷ್ಮಿದೇವಿಯ ಪುತ್ಥಳಿಯೊಂದನ್ನು ಮಾಡಿಸಿದ್ದ, ಮುತ್ತೈದೆಯರಿಗೆ ಬಟ್ಟೆಗಳನ್ನು ಮಾಡಿಸುತ್ತಿದ್ದ, ತನ್ನೂರಲ್ಲಿ ದೇವಸ್ಥಾನ ಕಟ್ಟಿಸುವ ಯೋಚನೆ ಅವನಲ್ಲಿ ಹುಟ್ಟಿತ್ತು ಎಂದು ಮಲಗೊಂಡ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಗಪ್ಪ ಹರಿಜನ್ ಪ್ರೀತಿಸಿ ಮದುವೆಯಾಗಿದ್ದ, ಅದರೆ ಅವನ ಸಂಗಾತಿ ಬಹಳ ದಿನ ಬದುಕುಳಿಯಲಿಲ್ಲ: ಮಹಾಂತೇಶ್, ಪೊಲೀಸ್ ಆಧಿಕಾರಿ