ಭಗವಾ ಧ್ವಜ ಹಿಂದೂ ಧರ್ಮದ ಪ್ರತೀಕ: RSS ತ್ರಿವರ್ಣಧ್ವಜವನ್ನೂ ಒಪ್ಪಿಕೊಂಡಿದೆ; ಮೋಹನ್ ಭಾಗವತ್

Updated on: Nov 09, 2025 | 4:26 PM

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಗವಾ ಧ್ವಜ ಮತ್ತು ರಾಷ್ಟ್ರಧ್ವಜದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಭಗವಾ ಧ್ವಜ ಹಿಂದೂ ಧರ್ಮದ ಪ್ರತೀಕವಾಗಿದ್ದು, ಆರ್‌ಎಸ್‌ಎಸ್ ಅದನ್ನು ತನ್ನ ಸಂಕೇತವಾಗಿ ಬಳಸಿದೆ. 1933ರಲ್ಲಿ ಭಗವಾ ಧ್ವಜವನ್ನೇ ರಾಷ್ಟ್ರಧ್ವಜ ಮಾಡಲು ಚರ್ಚೆ ನಡೆದಿತ್ತು, ಗಾಂಧೀಜಿಯವರ ತ್ರಿವರ್ಣ ಧ್ವಜದ ಪ್ರಸ್ತಾವನೆಯನ್ನು ಆರ್‌ಎಸ್‌ಎಸ್ ಒಪ್ಪಿಕೊಂಡಿದೆ ಎಂದರು.

ಬೆಂಗಳೂರು, ನವೆಂಬರ್​ 09: ಆರ್​ಎಸ್ಎಸ್ ಶತಮಾನೋತ್ಸವ ಹಿನ್ನೆಲೆ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ RSS ಏಕೆ ಭಗವಾ ಧ್ವಜವನ್ನು ಪ್ರತ್ಯೇಕವಾಗಿ ನೋಡುತ್ತೆ ಎಂಬ ಪ್ರಶ್ನೆನೆ ಉತ್ತರಿಸಿದ ಮುಖ್ಯಸ್ಥ ಮೋಹನ್ ಭಾಗವತ್, ಭಗವಾ ಧ್ವಜ ಹಿಂದೂ ಧರ್ಮದ ಪ್ರತೀಕ. ಭಗವಾಧ್ವಜ ಮುಂದಿಟ್ಟುಕೊಂಡು RSS ಸಂಕೇತವಾಗಿ ಬಳಸಿಕೊಂಡಿದೆ. 1933ರಲ್ಲಿ ಧ್ವಜ ಸಮಿತಿ ಮೊದಲಿಗೆ ರಾಷ್ಟ್ರ ಧ್ವಜದ ಬಗ್ಗೆ ಚರ್ಚಿಸಿತ್ತು. ಭಗವಾ ಧ್ವಜವನ್ನೇ ರಾಷ್ಟ್ರ ಧ್ವಜ ಮಾಡಬೇಕು ಎಂಬ ಚರ್ಚೆ ನಡೆದಿತ್ತು. ಈ ವೇಳೆ ಮಹಾತ್ಮ ಗಾಂಧೀಜಿ ಅವರು ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜ ಮಾಡುವ ಬಗ್ಗೆ ಮುಂದಿಟ್ಟರು. ಹೀಗಾಗಿ RSS ಸಹ ಗಾಂಧೀಜಿ ಸೂಚಿಸಿದ ತ್ರಿವರ್ಣಧ್ವಜ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.