ಭರತ್ ಭೂಷಣ್ ಅಂತ್ಯಕ್ರಿಯೆ ವೇಳೆ ಮಗನನ್ನು ಎದೆಗವುಚಿಕೊಂಡು ಕುಳಿತ ಪತ್ನಿ ಸುಜಾತಾ

Updated on: Apr 24, 2025 | 5:37 PM

ಭರತ್ ಭೂಷಣ್ ಅವರ ಅಂತಿಮ ವಿಧಿವಿಧಾನಗಳನ್ನು ಅವರ ಸಹೋದರ ಪ್ರೀತಂ ನೆರವೇರಿಸಿದರು. ಈಗಾಗಲೇ ವರದಿಯಾಗಿರುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರದ ಪ್ರತಿನಿಧಿಯಾಗಿ ಭರತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವಿ ವಿಜಯೇಂದ್ರ ಅವರು ಭರತ್ ಮನೆಗೆ ತೆರಳಿ ತಮ್ಮ ಅಂತಿಮ ನಮನ ಸಲ್ಲಿಸಿದರು.

ಬೆಂಗಳೂರು, ಏಪ್ರಿಲ್ 24: ನಾಲ್ಕು ವರ್ಷದ ಈ ಮಗುವಿಗೆ ತನ್ನ ಸುತ್ತ ನಡೆಯುತ್ತಿರುವ ಚಟಟುವಟಿಕೆಗಳ ಬಗ್ಗೆ ಅರಿವಿದೆ, ಆದರೆ ಯಾಕೆ ಇದನ್ನೆಲ್ಲ ಮಾಡುತ್ತಿದ್ದಾರೆ ಅಂತ ಗೊತ್ತಿರಲಾರದು. ಉಗ್ರರ ಗುಂಡಿಗೆ ಮಂಗಳವಾರ ಬಲಿಯಾದ ಭರತ್ ಭೂಷಣ್ ಅವರ ಪತ್ನಿ ಸುಜಾತಾ (Sujata) ಮಗನನ್ನು ಎದೆಗವುಚಿಕೊಂಡು ಪತಿಯ ಅಂತ್ಯಕ್ರಿಯೆಯನ್ನು ವೀಕ್ಷಿಸುತ್ತಿದ್ದಾರೆ. ಅವರ ಮುಖದಲ್ಲಿ ನಿರ್ಭಾವುಕತೆ ಮತ್ತು ಶೂನ್ಯ ದೃಷ್ಟಿ, ಎರಡು ದಿನಗಳಿಂದ ಅತ್ತು ಅತ್ತು ಕಣ್ಣೀರು ಬತ್ತಿಹೋಗಿದೆ. ನಗರದ ಹೆಬ್ಬಾಳದಲ್ಲಿರುವ ಚಿತಾಗಾರದಲ್ಲಿ ಸರ್ಕಾರೀ ಮರ್ಯಾದೆ ಮತ್ತು ಒಕ್ಕಲಿಗ ಸಂಪ್ರದಾಯದಂತೆ ಭರತ್ ಭೂಷಣ್ ಅವರ ಅಂತ್ಯಕ್ರಿಯೆ ನೆರವೇರಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು.

ಇದನ್ನೂ ಓದಿ:  Pahelgam Terrorist Attack: ಶವಪೆಟ್ಟಿಗೆಯಲ್ಲಿ ಪತಿ ಭರತ್ ಭೂಷಣ್ ದೇಹ ನೋಡುತ್ತಲೇ ಕುಸಿದುಬಿದ್ದ ಪತ್ನಿ ಸುಜಾತಾ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ