ಮುಟ್ಟಿನ ಜಾಗೃತಿ ಮೂಡಿಸುತ್ತಿರುವ ಭಾರತಿಗೆ ಟಿವಿ9 ಕನ್ನಡದ ಹೆಮ್ಮೆಯ ಕನ್ನಡತಿ ಪ್ರಶಸ್ತಿ

|

Updated on: Feb 22, 2025 | 9:35 PM

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್​ಮ್ಯಾನ್ ಸಿನಿಮಾದಿಂದ ಪ್ರೇರೇಪಿತರಾದ ಭಾರತಿ ಕಡಿಮೆ ಬೆಲೆಯಲ್ಲಿ ಮಹಿಳೆಯರಿಗೆ ಪ್ಯಾಡ್ ಸಿಗುವಂತೆ ಮಾಡಲು ಉದ್ಯಮ ಶುರುಮಾಡಿದರು. ತಾವು ಚಿಕ್ಕವರಾಗಿದ್ದಾಗ ಋತುಮತಿಯಾದಾಗ ಅನುಭವಿಸಿದ ಸಮಸ್ಯೆಗಳು ಇಂದಿನ ಮಹಿಳೆಯರಿಗೆ ಆಗಬಾರದು ಎಂಬ ಕಾರಣಕ್ಕೆ 2500 ವಿದ್ಯಾರ್ಥಿಗಳಿಗೆ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಿ ಸ್ಯಾನಿಟರಿ ಪ್ಯಾಡ್ ಒದಗಿಸುತ್ತಿದ್ದಾರೆ.

ಮಹಿಳೆಯರು ಋತುಸ್ರಾವದಲ್ಲಿ ಬಳಸುವ ಪ್ಯಾಡ್​ ತಯಾರಿಸುವ ಮೂಲಕ ಸಾಧನೆ ಮಾಡಿರುವ ಭಾರತಿ ಗುಂಡ್ಲಾನೂರ್ ಅವರಿಗೆ ಟಿವಿ9 ಕನ್ನಡದ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಲಾಗಿದೆ. ಸಚಿವ ಚೆಲುವರಾಯಸ್ವಾಮಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್​ಮ್ಯಾನ್ ಸಿನಿಮಾದಿಂದ ಪ್ರೇರೇಪಿತರಾದ ಭಾರತಿ ಕಡಿಮೆ ಬೆಲೆಯಲ್ಲಿ ಮಹಿಳೆಯರಿಗೆ ಪ್ಯಾಡ್ ಸಿಗುವಂತೆ ಮಾಡಲು ಉದ್ಯಮ ಶುರುಮಾಡಿದರು. ತಾವು ಚಿಕ್ಕವರಾಗಿದ್ದಾಗ ಋತುಮತಿಯಾದಾಗ ಅನುಭವಿಸಿದ ಸಮಸ್ಯೆಗಳು ಇಂದಿನ ಮಹಿಳೆಯರಿಗೆ ಆಗಬಾರದು ಎಂಬ ಕಾರಣಕ್ಕೆ 2500 ವಿದ್ಯಾರ್ಥಿಗಳಿಗೆ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಿ ಸ್ಯಾನಿಟರಿ ಪ್ಯಾಡ್ ಒದಗಿಸುತ್ತಿದ್ದಾರೆ.

 

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ