ಭಟ್ಕಳ: ತೆರವು ಮಾಡಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದ ಅನಂತ್ ಕುಮಾರ್ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ಸಾವರ್ಕರ್ ಬೊರ್ಡ್ ಸಮೇತ ಧ್ವಜ ಕಟ್ಟೆ ತೆರವು ಮಾಡಲಾಗಿತ್ತು. ಇದೀಗ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿದ್ದಾರೆ. ಇಂದು ಕಾರ್ಯಕರ್ತರ ಸಭೆಗೆಂದು ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದಾಗ ಧ್ವಜ ಹಾರಿಸಿದ್ದಾರೆ.
ಕಾರವಾರ, ಮಾ.4: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಅವರು ಧ್ವಜ ತೆರವು ಮಾಡಿದ್ದ ಸ್ಥಳದಲ್ಲೇ ಹನುಮ ಧ್ವಜವನ್ನು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ನಡೆದಿದೆ. ಆ ಮೂಲಕ ಸಂಸದರು ಮತ್ತೆ ಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ. ಅನಧಿಕೃತವಾಗಿ ಧ್ವಜ ಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ಸಾವರ್ಕರ್ ಬೊರ್ಡ್ ಅನ್ನು ತೆರವು ಮಾಡಲಾಗಿತ್ತು. ಇದಕ್ಕೆ ಸ್ಥಳಿಯ ಹಿಂದೂ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ಇಂದು ಕಾರ್ಯಕರ್ತರ ಸಭೆಗೆಂದು ಅನಂತ್ ಕುಮಾರ್ ಹೆಗಡೆ ಅವರು ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನಾನಿದ್ದೇನೆ ನಡಿರಿ ಎಂದು ಹೇಳಿ ಅನಂತ್ ಕುಮಾರ್ ಹೆಗಡೆ ಅವರು ತೆರವು ಮಾಡಲಾಗಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದರು. ಅಲ್ಲದೆ, ಸಾವರ್ಕರ್ ಬೋರ್ಡ್ ಕೂಡ ಹಾಕಿದರು.
ಇದನ್ನೂ ಓದಿ: ದೇವಸ್ಥಾನ ಕಟ್ಟಲು ಅನುಮತಿಗಾಗಿ ಭಿಕ್ಷೆ ಬೇಡಬೇಕು, ಚರ್ಚ್, ಮಸೀದಿಗೆ ಯಾರ ಅನುಮತಿ ಬೇಡ: ಅನಂತಕುಮಾರ್ ಹೆಗಡೆ
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ