Elephant Attack: ಕಾರ್ಮಿಕನ ಮೇಲೆ ಕಾಡಾನೆ ದಾಳಿ, ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಹಾಸನದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯ ಮೇಲೆ ಕಾಡಾನೆ ಡೆಡ್ಲಿ ಅಟ್ಯಾಕ್ ಮಾಡಿದೆ. ಸದ್ಯ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕೂಲಿ ಕಾರ್ಮಿಕ ಪಾರಾಗಿದ್ದಾನೆ. ಕಾಡಾನೆಗಳ ಹಾವಳಿಯಿಂದ ನಮ್ಮನ್ನು ರಕ್ಷಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಾಸನ, ಮಾರ್ಚ್.04: ಹಾಸನ ಜಿಲ್ಲೆಯಲ್ಲಿ ಒಂಟಿ ಸಲಗಗಳ ಹಾವಳಿ ಹೆಚ್ಚಾಗಿದೆ. ಒಂದೆಡೆ ಕರಡಿ ಇನ್ನೊಂದೆಡೆ ಭೀಮನ ಆರ್ಭಟ ಜೋರಾಗಿದೆ. ಹಾಡ ಹಗಲೇ ರೈತರ ಕೃಷಿ ಜಮೀನಿನ ಬಳಿ ಒಂಟಿ ಸಲಗ ಭೀಮನ ಸಂಚಾರ ಹೆಚ್ಚಾಗಿದೆ. ಹಾಸನ (Hassan) ಜಿಲ್ಲೆ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಭಯಾನಕ ಘಟನೆಯೊಂದು ನಡೆದಿದ್ದು ಸಿಸಿಟವಿ ದೃಶ್ಯ ಎದೆ ನಡುಗಿಸುವಂತಿದೆ. ವ್ಯಕ್ತಿಯ ಮೇಲೆ ಕಾಡಾನೆ ದಾಳಿ (Elephant Attack) ನಡೆಸಿದ್ದು ಕೂದಲೆಳೆ ಅಂತರದಲ್ಲಿ ಕೂಲಿ ಕಾರ್ಮಿಕ ಪಾರಾಗಿದ್ದಾನೆ. ಈ ವಿಡಿಯೋ ಎದೆ ಝಲ್ ಎನಿಸುವಂತಿದೆ.
ಇನ್ನು ಮತ್ತೊಂದೆಡೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮರ್ಕಹಳ್ಳಿ ಒಂಟಿ ಸಲಗ ಸಂಚಾರ ಮಾಡಿತ್ತಿದೆ. ಕೃಷಿ ಚಟುವಟಿಕೆಗೆ ಹಾಗು ಜಾನುವಾರು ಮೇಯಿಸಲು ಹೋದವರಿಗೆ ಜೀವ ಭಯ ಕಾಡುತ್ತಿದೆ. ಭತ್ತದ ಗದ್ದೆ, ಕಾಫಿತೋಟ, ಗ್ರಾಮಗಳ ಒಳಗೇ ಓಡಾಡುತ್ತಾ ಒಂಟಿ ಸಲಗ ಜನರಲ್ಲಿ ಆತಂಕ ಮೂಡಿಸಿದೆ. ಜನರಲ್ಲಿ ಆತಂಕ ಸೃಷ್ಟಿ ಮಾಡಿರೊ ಕಾಡಾನೆಗಳ ಸ್ಥಳಾಂತರಕ್ಕೆ ಜನrಉ ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ