ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ಮುಂದಿನ ನಿರ್ಧಾರ ತಿಳಿಸಿದ ಭಾವನಾ
ನಟಿ ಭಾವನಾ ರಾಮಣ್ಣ ಅವರು ಮದುವೆ ಇಲ್ಲದೇ, ಐವಿಎಫ್ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಅವರು ಟಿವಿ9 ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳು ‘ನಮ್ಮ ತಂದೆ ಯಾರು’ ಅಂತ ಕೇಳಿದರೆ ಭಾವನಾ ಏನು ಹೇಳುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ.
ನಟಿ ಭಾವನಾ ರಾಮಣ್ಣ (Bhavana Ramanna) ಅವರು ಮದುವೆ ಇಲ್ಲದೇ, ಐವಿಎಫ್ (IVF) ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಅವರು ಟಿವಿ9 ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳು ‘ನಮ್ಮ ತಂದೆ ಯಾರು’ ಅಂತ ಕೇಳಿದರೆ ಭಾವನಾ ಏನು ಹೇಳುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಆ ಕುರಿತು ಮಾನಸಿಕವಾಗಿ ತಮ್ಮ ತಯಾರಿ ಹೇಗಿದೆ ಎಂಬುದನ್ನು ಭಾವನಾ ವಿವರಿಸಿದ್ದಾರೆ. ‘ಇದು ನನ್ನೊಬ್ಬಳ ಜವಾಬ್ದಾರಿ ಅಲ್ಲ. ಇಡೀ ಸಮಾಜ ಸಹಕರಿಸಬೇಕು. ಯಾವುದೇ ಮಗು ಬೆಳೆಯುವಾಗ ಒಳ್ಳೆಯ ವಾತಾವರಣ ಇರಬೇಕು. ಮಕ್ಕಳಿಗೆ ಕೀಳರಿಮೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಭಾವನಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
