ಗುರು ಪೂರ್ಣಿಮಾದಂದು ಭವಾನಿ ರೇವಣ್ಣ ಕನಕಪುರದ ಕಬ್ಬಾಳಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 13, 2022 | 1:55 PM

ಈ ಭಾಗದ ಹುಡುಗರೆಲ್ಲ ಅಕ್ಕ ಒಮ್ಮೆ ಬಂದು ದೇವಿಯ ದರ್ಶನ ಪಡೆದು ಹೋಗಿ ಅಂತ ಒತ್ತಾಯಿಸುತ್ತಿದ್ದರು, ಹಾಗಾಗಿ ಬಂದಿದ್ದು ಅಂತಷ್ಟೇ ಭವಾನಿ ಹೇಳಿದರು.

ರಾಮನಗರ: ಭವಾನಿ ರೇವಣ್ಣ (Bhavani Revanna) ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ಆದರೆ, ಅವರು ಮಾತ್ರ ಯಾವುದನ್ನೂ ದೃಢವಾಗಿ ಹೇಳುತ್ತಿಲ್ಲ. ಗುರು ಪೂರ್ಣಿಮಾ (Guru Purnima) ದಿನವಾದ ಬುಧವಾರ ಅವರು ಕನಕಪುರ ತಾಲ್ಲೂಕಿನಲ್ಲಿರುವ ಕಬ್ಬಾಳಮ್ಮ (Kabbalamma) ದೇವಿಯ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಜಕೀಯಕ್ಕೆ ಎಂಟ್ರಿ ಕೊಡುವ ಹರಕೆ ಹೊತ್ತು ದೇವಿಯ ದರ್ಶನ ಪಡೆದಿರಾ ಅಂತ ಮಾಧ್ಯಮದವರು ಕೇಳಿದ ಪಶ್ನೆಗೆ ಅವರು ಹಾಗೇನಿಲ್ಲ, ಈ ಭಾಗದ ಹುಡುಗರೆಲ್ಲ ಅಕ್ಕ ಒಮ್ಮೆ ಬಂದು ದೇವಿಯ ದರ್ಶನ ಪಡೆದು ಹೋಗಿ ಅಂತ ಒತ್ತಾಯಿಸುತ್ತಿದ್ದರು, ಹಾಗಾಗಿ ಬಂದಿದ್ದು ಅಂತಷ್ಟೇ ಹೇಳಿದರು.

ಇದನ್ನೂ ಓದಿ:  Rashmika Mandanna: ‘ನನ್ನ ಮತ್ತು ಟೈಗರ್​ ಶ್ರಾಫ್​ ಕುರಿತ ಗಾಸಿ​ಪ್​ ನಿಜ’: ವಿಡಿಯೋ ಸಮೇತ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ